ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಅನಿಕೇತನ ಪದವಿಪೂರ್ವ ಕಾಲೇಜಿನಲ್ಲಿ 2023 -24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಇತ್ತೀಚಿಗೆ ಕಾಲೇಜುವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅರ್ಪಿತ 549 ಅಂಕ, ಮಹದೇವ ನಾಯ್ಕ 529 ಅಂಕ ಹಾಗೂ ಕಲಾವಿಭಾಗದಲ್ಲಿ ಮೇಘನಾ 512 ಅಂಕ, ದೀಕ್ಷಿತ 510 ಅಂಕಗಳಿಸಿದ ಹಿನ್ನೆಲೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಡಾ.ಜೆ ಸೋಮಣ್ಣ, ಪ್ರಾಂಶುಪಾಲ ಬಸವರಾಜು, ಉಪನ್ಯಾಸಕರಾದ ಲೋಕೇಶ್, ಅಭಿಜಿತ್, ಮಹಾದೇವ ಪ್ರಸಾದ್, ಚೇತನ್, ಶಿವನಂಜು ಇದ್ದರು.