ಮಡಿಕೇರಿ: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಏಳನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ ಟೂರ್ನಿಯಲ್ಲಿ ಭಾನುವಾರ 9 ತಂಡಗಳು ಗೆಲುವು ದಾಖಲಿಸಿದವು. ಅಯ್ಯಂಡ್ರ, ಮುಕ್ಕಾಟಿ, ಕಲ್ಲುಮುಟ್ಲು ಪ್ರೀ ಕ್ವಾರ್ಟರ್ಗೆ ಪ್ರವೇಶ ಪಡೆದುಕೊಂಡಿತು.
ಫಲಿತಾಂಶ: ಮುಕ್ಕಾಟಿ ತಂಡವು 4-0 ಅಂತರದಿಂದ ಹೊಸೊಕ್ಲು ತಂಡವನ್ನು ಮಣಿಸಿತು. ಅಯ್ಯಂಡ್ರಕ್ಕೆ ಪೊಡನೋಳನ ವಿರುದ್ದ 1-0 ಗೋಲುಗಳ ಜಯ ದೊರೆಯಿತು. ಕಲ್ಲುಮುಟ್ಲು ತಂಡಕ್ಕೆ ಮುಕ್ಕಾಟಿ (ಕಡಿಯತ್ತೂರು) ವಿರುದ್ದ 2-0 ಅಂತರದ ಗೆಲುವು ದಕ್ಕಿತು. ದಂಬೆಕೋಡಿ ತಂಡವು ಚೆಟ್ಟಡ್ಕವನ್ನು 2-0 ಗೋಲುಗಳಿಂದ ಸೋಲಿಸಿತು. ಬೈಲೋಶಿ ತಂಡವು ಕಡ್ಲೇರವನ್ನು 3-2 ಗೋಲುಗಳಿಂದ ಮಣಿಸಿತು. ಅಯ್ಯಂಡ್ರ ತಂಡವು ಚೆಟ್ಟಿಮಾಡವನ್ನು 4-2 ಗೋಲುಗಳಿಂದ ಮಣಿಸಿತು. ಮುಕ್ಕಾಟಿ ತಂಡಕ್ಕೆ ತೇನನ ವಿರುದ್ದ 3-0 ಗೋಲುಗಳ ಜಯ ದೊರೆಯಿತು. ಕಲ್ಲುಮುಟ್ಲು ತಂಡವು ದಂಬೆಕೋಡಿಯನ್ನು 2-1 ಗೋಲುಗಳಿಂದ ಪರಾಭವಗೊಳಿಸಿತು. ಟೈಬ್ರೇಕರ್ನಲ್ಲಿ ಕೂಡಕಂಡಿ ತಂಡಕ್ಕೆ 2-1 ಅಂತರದಿAದ ಪೂಳಕಂಡ್ರ ವಿರುದ್ದ ಗೆಲುವು ಸಿಕ್ಕಿತು.
ಇಂದಿನ ಪಂದ್ಯಗಳು ;
ಬೆ. 8 ; ತಡಿಯಪ್ಪನ-ಪೊಕ್ಕುಳಂಡ್ರ
: ಕರ್ಣಯ್ಯನ-ಮರದಾಳು
; ಮುಕ್ಕಾಟಿ (ಅಪ್ಪಂಗಳ)-ಕೊAಪುಳಿರ
; ಕಾಯರತೋಡಿ-ಯಾಲದಾಳು
; ಕತ್ರಿಕೊಲಿ-ಪಡಿಕಲ್ಲು
; ಮುಕ್ಕಾಟಿ (ಕೈಕೇರಿ)-ಕುಯ್ಯಮುಡಿ
ಫೋಟೋ 19 ಎಂಡಿಕೆ 02 ; ಗೌಡ ಫುಟ್ಬಾಲ್