ವಿಜಯಪುರ, ಫೆಬ್ರವರಿ 12, 2025: ಭೀಮಾ ತೀರದಲ್ಲಿ ಮತ್ತೊಮ್ಮೆ ನೆತ್ತರು ಹರಿದಿದೆ. ಬಾಗಪ್ಪ ಹರಿಜನರನ್ನು ಹೊಡೆದುರುಳಿಸಲಾಗಿದೆ. ಬಾಗಪ್ಪ ಹರಿಜನ್ ಮೇಲೆ ಕೊಡಲಿಯಿಂದ ದಾಳಿ ಮಾಡಿ ಮನೆ ಮುಂದೆಯೇ ಕೊಲೆ ಮಾಡಲಾಗಿದೆ.

ಮಂಗಳವಾರ ರಾತ್ರಿ 8:50ರ ಸುಮಾರಿಗೆ ವಿಜಯಪುರದ ಮದಿನಾ ನಗರದಲ್ಲಿ ದುಷ್ಕರ್ಮಿಗಳು ದಾಳಿ ಮಾಡಿ ಬಾಗಪ್ಪ ಹರಿಜನ್ನನ್ನು ಮುಗಿಸಿದ್ದಾರೆ.ಬಾಗಪ್ಪನ ಬಾಡಿಗೆ ಮನೆ ಮುಂದೆ ನಾಲ್ಕೈದು ಜನರ ಗ್ಯಾಂಗ್ ದುಷ್ಟಕೃತ್ಯ ನಡೆಸಿದೆ. ಮನೆ ಎದುರು ಊಟ ಮಾಡಿಕೊಂಡು ಬಾಗಪ್ಪ ವಾಕಿಂಗ್ ಮಾಡ್ತಿದ್ದ ವೇಳೆ ದುಷ್ಕೃತ್ಯ ನಡೆಸಿದ್ದಾರೆ. ಆಟೋದಲ್ಲಿ ಬಂದ ನಾಲ್ಕೈದು ಜನರ ಗ್ಯಾಂಗ್ ಕೊಡಲಿ ಹಾಗೂ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಕೇವಲ 7-8 ನಿಮಿಷದಲ್ಲಿ ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ .
ಬಾಗಪ್ಪನ ಮೇಲೆ ಸುಮಾರು 10 .ಕೇಸ್‌ಗಳಿವೆ. ಈ ಪೈಕಿ 6 ಜೀವ ತೆಗೆದ ಪ್ರಕರಣದಲ್ಲಿ ಆತ ಆರೋಪಿಯಾಗಿದ್ದಾನೆ . ಬಾಗಪ್ಪ ಮೇಲೆ ಜೀವ ತೆಗೆಯಲು ಯತ್ನಿಸಿದ ಪ್ರಕರಣ ಕೂಡ ದಾಖಲಾಗಿತ್ತು. 1993ರಿಂದ ಬಾಗಪ್ಪನ ಕ್ರಿಮಿನಲ್ ಹಿಸ್ಟರಿ ಶುರುವಾಗಿತ್ತು. ಕೊನೆಯದಾಗಿ 2016-17ರಲ್ಲೂ ಈತನ ವಿರುದ್ಧ ಕೇಸ್ಗಳು ದಾಖಲಾಗಿದ್ದವು. ಇದೀಗ ಸಾಕಷ್ಟು ಪ್ಲಾನ್ ಮಾಡಿ ಬಾಗಪ್ಪನನ್ನು ಹತ್ಯೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಬಾಗಪ್ಪ ಹರಿಜನ “ನಾನೂ ಕೂಡಾ ಸಾಮಾನ್ಯರಂತೆ ಬದುಕಬೇಕು ಎಂದುಕೊಂಡಿದ್ದೇನೆ. ಆದರೆ ವಿರೋಧಿಗಳು ಬಿಡುತ್ತಿಲ್ಲ” ಎಂದು ಹೇಳಿಕೊಂಡಿದ್ದರು. ಕೊಲೆ, ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದ ಬಾಗಪ್ಪ ಹರಿಜನ ಸಹ ಕೊಲೆಯಾಗಿದ್ದಾನೆ.
2017 ರಲ್ಲಿ ಕೋರ್ಟ್ ಆವರಣದಲ್ಲಿ ಆತನ ಮೇಲೆ ಗುಂಡಿನ ದಾಳಿ ನಡೆದಿತ್ತು. ಆರು ಗುಂಡುಗಳು ತಗುಲಿದ್ದ ಬಾಗಪ್ಪ ಹರಿಜನನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಬಳಿಕ ಬಹುತೇಕ ಆತ ಭೂಗತನಾಗಿದ್ದ. ಬಾಗಪ್ಪ ಹರಿಜನ, ನಾನು ಸಮಾಜಮುಖಿಯಾಗಿ ಬದುಕಬೇಕು ಎಂದು ಕೊಂಡಿದ್ದೇನೆ. ಆದರೆ ನನ್ನ ಸಹನೆಯನ್ನು ಪರೀಕ್ಷೆ ಮಾಡಬೇಡಿ. ನನ್ನ ವಿಷಯಕ್ಕೆ ಬಂದರೆ 24 ಗಂಟೆಯಲ್ಲಿ ಮತ್ತೆ ಬಂದೂಕು ಹಿಡಿಯುತ್ತೇನೆ ಎಂದು ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟಿದ್ದ ಇದೀಗ ಬಾಗಪ್ಪನನ್ನು ಹೊಡೆದುರುಳಿಸಲಾಗಿದೆ.
