ಹುಬ್ಬಳ್ಳಿ : ಲೋಕಾಯುಕ್ತ ತನಿಖೆ ಬಗ್ಗೆ ನಂಬಿಕೆ ಇಲ್ಲ , ಪ್ರಕರಣದ ತನಿಖೆ ಎಲ್ಲವೂ ಪೂರ್ವನಿಯೋಜಿತ. ಈ ನಾಟಕಕ್ಕೆ ಸಿಎಂ ರೂವಾರಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಮುಖ್ಯಮಂತ್ರಿ ಒಬ್ಬರು ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದಾರೆ. ಸಿಎಂ ಟೂರ್ ಪ್ರೋಗ್ರಾಮ್ ಬಗ್ಗೆಯೇ ಸಾಕಷ್ಟು ಅನುಮಾನ ಇದೆ. ಲೋಕಾಯುಕ್ತ ತನಿಖೆಗೆ ಒಳಗಾಗುವ ನಾಟಕಕ್ಕೆ ಸಿಎಂ ರೂವಾರಿಯಾಗಿದ್ದಾರೆ . ಮುಡಾ ಹಗರಣದಲ್ಲಿ ತನಿಖೆ ಸೂಕ್ತ ರೀತಿ ನಡೆಯುತ್ತಿಲ್ಲ. ಯಾರೊಬ್ಬರನ್ನ ವಶಕ್ಕೆ ಪಡೆದಿಲ್ಲ ಎಂದು ಟೀಕಿಸಿದರು. 10 ಗಂಟೆಗೆ ವಿಚಾರಣೆಗೆ ಬರ್ತೇನೆ ಎಂದು ಸ್ವತ ಸಿಎಂ ಟೈಂ ಫಿಕ್ಸ್ ಮಾಡಿದ್ದಾರೆ. ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆ ನಡೆಸಬೇಕು. ಆಗ ಮಾತ್ರ ಪಾರದರ್ಶಕ ತನಿಖೆ ಸಾಧ್ಯ ಎಂದು ಬೊಮ್ಮಾಯಿ ಹೇಳಿದ್ದಾರೆ.