ತಾಂತ್ರಿಕ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ 5 ಎಸ್ಕಾಂಗಳ ವ್ಯಾಪ್ತಿಯ 98 ನಗರಗಳಲ್ಲಿ ಆನ್ಲೈನ್ ಸೇವೆಗಳು ಬಂದ್ ಆಗಲಿವೆ. ಇಂದು ಮಧ್ಯಾಹ್ನ 12 ರಿಂದ ನಾಡಿದ್ದು- ಬೆಳಗ್ಗೆ 11.59 ವರೆಗೆ ಎಲ್ಲಾ ರೀತಿಯ ಆನ್ ಲೈನ್ ಸೇವೆ ಬಂದ್ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಏನಿದು ತಾಂತ್ರಿಕ ಸಮಸ್ಯೆ?
ರಾಜ್ಯದ ಐದು ಎಸ್ಕಾಂಗಳನ್ನು ಒಂದೇ ಸೂರಿನಡಿ ತರುವ ವ್ಯವಸ್ಥೆ ಕಲ್ಪಿಸಲು ಆರ್-ಎಪಿಡಿಆರ್ಪಿ ಅನುಷ್ಠಾನಗೊಳಿಸಲಾಗುತ್ತಿದೆ. ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾ ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುತ್ತಿರುವ ಅಧಿಕಾರಿಗಳು. ಈ ಹಿನ್ನೆಲೆ ಇಂದು ಮಧ್ಯಾಹ್ನದಿಂದಲೇ ಆನ್ಲೈನ್, ಆಫ್ಲೈನ್ ಸೇವೆ ಸ್ಥಗಿತಗೊಳ್ಳುವುದರಿಂದ ಮುಂದಿನ ಮೂರು ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಅಲಭ್ಯವಾಗಲಿದೆ.
ಇಂದು ಮಧ್ಯಾಹ್ನ ದಿಂದ ಬೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆ. ಈಗಾಗಲೇ ಲೋಡ್ ಶೆಡ್ಡಿಂಗ್ ಪವರ್ ಕಟ್ ಸಮಸ್ಯೆಯಿಂದ ಹೈರಾಣಾಗಿರುವ ಜನರು ಈ ನಡುವೆ ಎರಡು ದಿನ ಎಸ್ಕಾಂಗಳ ವ್ಯಾಪ್ತಿಯಲ್ಲಿ ಆನ್ ಲೈನ್ ಸೇವೆಗೆ ತೊಂದರೆಯಾಗಲಿದೆ. ತಾಂತ್ರಿಕ ನಿರ್ವಹಣೆ ಕಾಮಗಾರಿ ಮುಗಿದ ಬಳಿಕ ಎಂದಿನಂತೆ ಸೇವೆ ಲಭ್ಯವಾಗಲಿದೆ.