ಗೋಣಿಕೊಪ್ಪ: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಮೇ 1 ರಿಂದ ಮಡಿಕೇರಿ ಜನರಲ್ ಕೆ. ಎಸ್. ತಿಮ್ಮಯ್ಯ ನಡೆಯಲಿರುವ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ (ಲೆದರ್ಬಾಲ್) ಟೂರ್ನಿಗೆ ಆಂತುರ ಕೂರ್ಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 195 ಆಟಗಾರರ ಹರಾಜು ನಡೆಯಿತು. 10 ತಂಡಗಳ ಮಾಲೀಕರು ಆಟಗಾರರ ಖರೀದಿ ಮಾಡಿದರು.
ಬೆಳಗ್ಗೆಯಿಂದ ಸಂಜೆಯವರೆಗೂ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು. ಕೊಡವ , ಕೂರ್ಗ್ , ಕೂರ್ಗ್ ಯುನೈಟೆಡ್, ಟೀಂ ಲೆವರೇಜ್, ವೈಲ್ಡ್ ಫ್ಲವರ್, ಕೊಡವ ವಾರಿಯರ್ಸ್, ಅಂಜಿಕೇರಿ ನಾಡ್, ರಾಯಲ್ ಟೈರ್ಸ್, ಎಂಟಿಬಿ ರಾಯಲ್ಸ್ ಹಾಗೂ ಪ್ರಗತಿ ಕ್ರಿಕೆಟರ್ಸ್ ತಂಡಗಳ ಮಾಲೀಕರು ಭಾಗವಹಿಸಿದ್ದರು.
ಅವರೆಮಾದಂಡ ಶರಣ್ ಪೂಣಚ್ಚ, ಮುಕ್ಕಾಟೀರ ಮ್ಯಾಕ್ ತಿಮ್ಮಯ್ಯ, ಪಾಡೇಯಂಡ ದೀಪಕ್ ದೇವಯ್ಯ ಮಾಲೀಕತ್ವದ ಕೊಡವ ಟ್ರೇಂಬ್, ಮಾದಂಡ ತಿಮ್ಮಯ್ಯ, ಚೇಂದಂಡ ನವೀನ್ ಪೊನ್ನಪ್ಪ ಮಾಲೀಕತ್ವದ ಪ್ರಗತಿ ಕ್ರಿಕೆರ್ಸ್, ಚೆಟ್ಟಿಯಾರಂಡ ನಿರನ್, ಕೋಟೇರ ಸುನಿಲ್, ಐಚೋಡಿಯಂಡ ಜೋಯಪ್ಪ ಮಾಲೀಕತ್ವದ ಕೂರ್ಗ್ ಯುನೈಟೆಡ್, ಬೊಪ್ಪಂಡ ಸೂರಜ್ ಗಣಪತಿ, ಲತಾ ಗಣಪತಿ ಮಾಲೀಕತ್ವದ ಟೀಂ ಲೆವರೇಜ್, ಪಾಲಚಂಡ ಜಗನ್ ಉತ್ತಪ್ಪ ಮಾಲೀಕತ್ವದ ವೈಲ್ಡ್ ಫ್ಲವರ್, ಮುಂಡ್ಯೋಳಂಡ ನಂದಾ ನಾಣಯ್ಯ, ಪರುವಂಡ ಹೇಮಂತ್, ಪರುವಂಡ ಮಿಥುನ್, ಬಾಚೇಟೀರ ತೇಜಸ್ವಿ ಮಾಲೀಕತ್ವದ ಕೊಡವ ವಾರಿರ್ಸ್, ಚೆಕ್ಕೇರ ಚಂದ್ರಪ್ರಕಾಶ್, ತೀತೀರ ರೋಶನ್ ಅಪ್ಪಚ್ಚು, ಚೆಕ್ಕೇರ ಆಕರ್ಶ್ ಪೂವಯ್ಯ ಮಾಲೀಕತ್ವದ ಅಂಜಿಕೇರಿ ನಾಡ್, ತಂಬುಕುಟ್ಟೀರ ಮದು ಮಂದಣ್ಣ ಮಾಲೀಕತ್ವದ ರಾಯಲ್ ಟೈರ್ಸ್, ತಂಬುಕುತ್ತೀರ ರಾಣಿ, ತ್ಯಾಗಿ ಮಾಲೀಕರಾಗಿರುವ ಎಂಟಿಬಿ ರಾಯಲ್ಸ್, ಬೇರೇರ ಪ್ರನೋಯ್ ಮಾಲೀಕತ್ವದ ಕೂರ್ಗ್ ಬ್ಲಾಸ್ರ್ಸ್ ತಂಡ ಪಾಲ್ಗೊಳ್ಳಲಿದೆ ಎಂದು ಪ್ರಕಟಿಸಲಾಯಿತು.
ಕೊಟ್ಟಂಗಡ ಆಯುಧ್ ಅಪ್ಪಣ್ಣ ಕೊಡವ ಭಾಷೆಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿಕೊಟ್ಟರು.
ಕೂರ್ಗ್ ಕ್ರಿಕೆಟ್ ಫೌಂಡೇಷನ್ ಪ್ರಮುಖರಾದ ಪೊರುಕೊಂಡ ಸುನಿಲ್, ಮಡ್ಲಂಡ ಫೆಮ್ಮು, ಡಾ. ಚೆರುಮಂದಂಡ ಸೋಮಣ್ಣ, ಪಾಲಚಂಡ ಜಗನ್ ಉತ್ತಪ್ಪ, ಚಂಡೀರ ರಚನ್, ಬಲ್ಲಂಡ ರೇಣಾ ದೇವಯ್ಯ, ಸುಮಿತ್ ವೋಹ್ರಾ, ಪೊರುಕೊಂಡ ಅನಿಲ್, ಕುಲ್ಲೇಟೀರ ಶಾಂತ ಕಾಳಪ್ಪ, ಟಿ. ಬಿ. ಕಿರಣ್, ಮಣವಟ್ಟೀರ ಲಿಕಿತಾ ರಾಯ್, ಪವಿತ್ರ ಉಪಸ್ಥಿತರಿದ್ದರು.
ಫೋಟೋ 7 ಜಿಕೆಪಿ 03 ; ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ (ಲೆದರ್ಬಾಲ್) ಟೂರ್ನಿಗೆ ಆಂತುರ ಕೂರ್ಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಡ್ಡಿಂಗ್ ಪ್ರಕ್ರಿಯೆ.