ಇಟ್ಟೀರಕ್ಕೆ ಪುಳ್ಳಂಗಡ ಶಾಕ್.. ಅಂಜಪರವಂಡ ಹೇಮಂತ್ ಹ್ಯಾಟ್ರಿಕ್ ಗೋಲು
ಸಣ್ಣುವಂಡ ಕಿಶೋರ್ ನಾಚಪ್ಪ ನಾಪೋಕ್ಲು
ಕುಂಡ್ಯೋಳಂಡ ಒಕ್ಕ, ಕೊಡವ ಹಾಕಿ ಅಕಾಡೆಮಿ ಸಹಯೋಗದಲ್ಲಿ ಕೆಪಿಎಸ್ ಶಾಲೆಯ ಜನರಲ್ ಕೆ. ಎಸ್. ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ 16 ತಂಡಗಳು ಮುನ್ನಡೆ ಕಾಯ್ದುಕೊಂಡವು.
ಫಲಿತಾಂಶ: ಅಂಜಪರವಂಡವು ತಿರುಟೇರವನ್ನು 5-1 ಗೋಲುಗಳಿಂದ ಮಣಿಸಿತು. ಅಂಜಪರವAಡ ಹೇಮಂತ್ ಮೂರು ಗೋಲು ಸಿಡಿಸಿದರು. ವಿನಯ್, ಅಬಿನ್ ಚಿಟ್ಯಪ್ಪ, ತಿರುಟೇರ ಪ್ರೀತಂ ತಲಾ ಒಂದೊಂದು ಗೋಲು ದಾಖಲಿಸಿದರು.
ಚೌರೀರ (ಹೊದ್ದೂರು) ಮಲಚೀರವನ್ನು 3-0 ಗೋಲುಗಳಿಂದ ಪರಾಭವಗೊಳಿಸಿತು. ಚೌರೀರ ಧನುಶ್ ನಾಣಯ್ಯ ಜೋಡಿ ಗೋಲು ಬಾರಿಸಿದರು. ಸೂರಜ್ 1 ಗೋಲು ಹೊಡೆದು ಅಂತರ ಹೆಚ್ಚಿಸಿದರು.
ಕೂತಂಡಕ್ಕೆ ಬೇಪಡಿಯಂಡ ವಿರುದ್ದ 4-0 ಗೋಲುಗಳ ಜಯ ದೊರೆಯಿತು. ಕೂತಂಡ ಸಂತೋಷ್ ಜೋಡಿ ಗೋಲು, ಗ್ಯಾನ್, ರಿಕಿ ಕುಶಾಲಪ್ಪ ತಲಾ ಒಂದೊAದು ಗೋಲು ಬಾರಿಸಿದರು.
ಪಾಂಡಂಡ ಚಂಗುಲಂಡವನ್ನು ಟೈಬ್ರೇಕರ್ನಲ್ಲಿ 4-3 ಗೋಲುಗಳಿಂದ ಮಣಿಸಿತು. ಉಭಯ ತಂಡಗಳು 1-1 ಸಮಬಲ ಸಾಧಿಸಿತು. ಪಾಂಡಂಡ ಕಾರ್ಲ್ ಕಾರ್ಯಪ್ಪ, ಚಂಗುಲಂಡ ವಿನಯ್ ಪೊನ್ನಣ್ಣ ಗೋಲು ಹೊಡೆದರು.
ಬಾಳೆಯಡಕ್ಕೆ ಕಾಂಡಂಡ ವಿರುದ್ದ 2-0 ಗೋಲುಗಳ ಜಯ ದೊರೆಯಿತು. ಬಾಳೆಯಡ ವಿನಿಲ್, ಸುತನ್ ಗೋಲು ಬಾರಿಸಿದರು.
ಚಿಂಡಮಾಡವು ಮಾಪಣಮಾಡವನ್ನು 1-0 ಗೋಲುಗಳಿಂದ ಸೋಲಿಸಿತು. ಚಿಂಡಮಾಡ ತ್ರಿಥನ್ ತಿಮ್ಮಯ್ಯ ಬಾರಿಸಿ ಏಕೈಕ ಗೋಲು ಗೆಲುವು ತಂದುಕೊಟ್ಟಿತು.
ಮಣವಟ್ಟೀರ ತಂಡವು ಮಾಳೇಟಿರವನ್ನು 2-0 ಗೋಲುಗಳಿಂದ ಸೋಲಿಸಿತು. ಮಣವಟ್ಟೀರ ಮಧು ಅಯ್ಯಪ್ಪ, ಅಪ್ಪಚ್ಚು ಗೋಲು ಹೊಡೆದು ಮಿಂಚಿದರು.
ನೆರವಂಡಕ್ಕೆ ವಲ್ಲಂಡ ವಿರುದ್ದ 3-0 ಗೋಲುಗಳ ಗೆಲುವು ದೊರೆಯಿತು. ನೆರವಂಡ ಕವನ್ ಕಾವೇರಪ್ಪ, ನಾಚಪ್ಪ, ಪ್ರವೀಣ್ ಪೆಮ್ಮಯ್ಯ ಗೋಲು ಸರದಾರರು.
ಕುಲ್ಲೇಟೀರಕ್ಕೆ ಉದಿಯಂಡ ವಿರುದ್ದ 4-0 ಅಂತರದ ಜಯ ದೊರೆಯಿತು. ಕುಲ್ಲೇಟೀರ ಅವನೀಶ್ ಮಾದಪ್ಪ ಜೋಡಿ ಗೋಲು, ಸಂಚಿತ್, ನಿಶ್ಚಲ್ ನಾಚಪ್ಪ ಗೋಲು ಬಾರಿಸಿದರು.
ಮೂಕೊಂಡ 4-2 ಗೋಲುಗಳ ಅಂತರದಲ್ಲಿ ಕುಮ್ಮಂಡವನ್ನು ಮಣಿಸಿತು. ಮೂಕೊಂಡ ನಿಖಿಲ್ ಜೋಡಿ ಗೋಲು, ಮಾಚಯ್ಯ, ಮಿತೇಶ್, ಕುಮ್ಮಂಡ ಸೋನು ನಾಣಯ್ಯ, ಕವನ್ ಕಾರ್ಯಪ್ಪ ಗೋಲು ಹೊಡೆದರು.
ಚೆಪ್ಪುಡೀರಕ್ಕೆ ಚೊಟ್ಟೆಯಂಡಮಾಡ ವಿರುದ್ದ 6-0 ಗೋಲುಗಳ ಅಮೋಘ ಗೆಲುವು ದೊರೆಯಿತು. ಚಪ್ಪುಡೀರ ಚೇತನ್ ಚಿಣ್ಣಪ್ಪ ಮೂರು ಗೋಲು ಸಿಡಿಸಿ ತಂಡಕ್ಕೆ ನೆರವಾದರು. ತಿಮ್ಮಯ್ಯ ಜೋಡಿ ಗೋಲು ದಾಖಲಿಸಿದರು. ನರೇನ್ ಕಾರ್ಯಪ್ಪ 1 ಗೋಲು ಸೇರಿಸಿದರು.
ಬೊಳ್ಳಂಡ ಯಶ್ ಮಾಚಯ್ಯ ಬಾರಿಸಿದ ಏಕೈಕ ಗೋಲು ಕಾಣತಂಡ ವಿರುದ್ದ 1-0 ಗೋಲುಗಳ ಗೆಲುವು ತಂದುಕೊಟ್ಟಿತು.
ಮಾಚಿಮಂಡಕ್ಕೆ ಚಿರಿಯಪಂಡ ವಿರುದ್ದ 3-1 ಗೋಲುಗಳ ಜಯ ದೊರೆಯಿತು. ಮಾಚಿಮಂಡ ಹರ್ಷಿತ್ ಸೋಮಣ್ಣ, ಆಶಿಕ್ ಉತ್ತಪ್ಪ, ಪ್ರಸಾದ್ ಚೆಂಗಪ್ಪ, ಚಿರಿಯಪಂಡ ದೀಪಕ್ ಸುಬ್ಬಯ್ಯ ತಲಾ ಒಂದೊAದು ಗೋಲುಗಳ ಕಾಣಿಕೆ ನೀಡಿದರು.
ಪುಳ್ಳಂಗಡ ಇಟ್ಟೀರವನ್ನು 3-1 ಗೋಲುಗಳಿಂದ ಸೋಲಿಸಿತು. ಪುಳ್ಳಂಗಡ ಪಿ. ಮುತ್ತಪ್ಪ ಜೋಡಿ ಗೋಲುಗಳು ಗೆಲುವಿನ ಹಾದಿ ತೋರಿಸಿದವು. ಮೀರಜ್ ಪೊನ್ನಣ್ಣ, ಇಟ್ಟೀರ ಚಿಟ್ಯಪ್ಪ ಒಂದೊAದು ಗೋಲು ದಾಖಲಿಸಿದರು.
ಚೇನಂಡವು ಕೇಳಪಂಡವನ್ನು 3-0 ಗೋಲುಗಳಿಂದ ಪರಾಭವಗೊಳಿಸಿತು. ಚೇನಂಡ ಸಚಿನ್ ಅಯ್ಯಪ್ಪ, ಮೌರ್ಯ ತಿಮ್ಮಯ್ಯ, ಅಯ್ಯಪ್ಪ ತಲಾ ಒಂದೊಂದು ಗೋಲು ಬಾರಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಐಚೇಟ್ಟೀರಕ್ಕೆ ಚಂಗೇಟೀರ ವಿರುದ್ದ 2-0 ಗೋಲುಗಳ ಜಯ ದೊರೆಯಿತು. ಉತ್ತಮ ಪ್ರದರ್ಶಣದ ಮೂಲಕ ಗಮನ ಸೆಳೆದಿದ್ದು ಚಂಗೇಟಿರ ಟೂರ್ನಿಯಿಂದ ಹೊರಬಿತ್ತು. ಐಚೇಟೀರ ತನೀಶ್, ವೇದ್ ಗೋಲು ಬಾರಿಸಿದರು.
ಪಂದ್ಯ ಪುರುಷರು: ತಿರುಟೇರ ಗೌತಂ ಗಣಪತಿ, ಮಲಚೀರ ರಕ್ಷಿತ್, ಬೇಪಡಿಯಂಡ ಸುಬ್ಬಯ್ಯ, ಚಂಗುಲಂಡ ಅಯ್ಯಪ್ಪ, ಕಾಂಡಂಡ ಬಿಷನ್ ಬೆಳ್ಯಪ್ಪ, ಮಾಪಣಮಾಡ ಬೋಪಣ್ಣ, ಮಾಳೇಟಿರ ಜಯ ಜೀವನ್, ವಲ್ಲಂಡ ಸೋಮಣ್ಣ, ಉದಿಯಂಡ ಧ್ಯಾನ್, ಚೊಟ್ಟೆಯಂಡಮಾಡ ಗೌರವ್, ಕಾಣತಂಡ ವಿನು ಸುಬ್ಬಯ್ಯ, ಚಿರಿಯಪಂಡ ದೀಪಕ್ ಸುಬ್ಬಯ್ಯ, ಇಟ್ಟೀರ ರೋಹನ್ ಅಚ್ಚಯ್ಯ, ಕೇಳಪಂಡ ಗಣೇಶ್ ನಾಣಯ್ಯ, ಚಂಗೇಟಿರ ಕರುಣ್ ಕಾರ್ಯಪ್ಪ.
ಇಂದಿನ ಪಂದ್ಯಗಳು
ಮೈದಾನ 1
ಬೆ.9: ಕುಂಡ್ಯೋಳಂಡ- ತೀತಮಾಡ
10: ಚೆಕ್ಕೇರ – ಪೊಂಜಂಡ
11:ಕಂಬೀರಂಡ- ಮಲ್ಲಾಜೀರ
ಮ.1:ಅಲ್ಲಾರಂಡ-ಕೊಂಗೇಟೀರ
2 :ಚೇಂದಂಡ-ಕಂಗಾಂಡ
3:ಪಾಲಂದೀರ-ಕೇಲೇಟಿರ
ಮೈದಾನ 2
ಬೆ. 9:ಮೇವಡ – ಮಂಡೇಟಿರ
10:ಚಂದುರ-ಕಾಳಿಮಾಡ
11:ಪುದಿಯೊಕ್ಕಡ-ಬೊಟ್ಟಂಗಡ
ಮ. 1:ಅಮ್ಮಣಿಚಂಡ-ಚೋಕಿರ
2:ಕಾಂಡೇರ – ಕೋಡಿಮಣಿಯಂಡ
3:ಮುಕ್ಕಾಟೀರ (ಬೋಂದ) – ಅಳಮೇಂಗಡ
ಫೋಟೋ 14 ಎಂಡಿಕೆ 06 ; ಮೂಕೊಂಡ-ಕುಮ್ಮಂಡ ಹೋರಾಟ
07 ; ಮಾಚಿಮಂಡ-ಚಿರಿಯಪಂಡ ಅಟ