ಬೆಂಗಳೂರು, ಜನವರಿ 2, 2025: ಎರಡೂವರೆ ವರ್ಷದ ಬಳಿಕ ಕಿಚ್ಚ ಸುದೀಪ ನಟನೆಯ ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ಧೂಳ್ ಎಬ್ಬಿಸಿದೆ.

ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದು ಮ್ಯಾಕ್ಸ್ ಸಿನಿಮಾ ಮುನ್ನುಗ್ಗುತ್ತಿದೆ. ಸುದೀಪ್ ಸಿನಿಮಾಗೆ ಪ್ರೇಕ್ಷಕ ಮಹಾಪ್ರಭು ಸೈ ಅಂದಿದ್ದಾನೆ. ಮ್ಯಾಕ್ಸ್ ಚಿತ್ರ ಹೊಸ ವರ್ಷದಲ್ಲಿ ಅದ್ಭುತ ಗಳಿಕೆ ಮಾಡಿದೆ. ಮ್ಯಾಕ್ಸ್ ಚಿತ್ರದ ಜನಪ್ರಿಯತೆ ಹೆಚ್ಚಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದರಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯಾಗಿದೆ. 2024ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.
ಸುದೀಪ್ ಅವರು ಕೇವಲ ಆ್ಯಕ್ಷನ್ ಸಿನಿಮಾಗಳ ಮೂಲಕ ಮಿಂಚಿದ್ದು ಕಡಿಮೆ. ಅವರ ಸಿನಿಮಾಗಳಲ್ಲಿ ಹಾಸ್ಯ, ರೊಮ್ಯಾನ್ಸ್ ಎಲ್ಲವೂ ಇರುತ್ತಿತ್ತು. ಆದರೆ, ‘ಮ್ಯಾಕ್ಸ್’ ಚಿತ್ರ ಔಟ್ ಆ್ಯಂಡ್ ಔಟ್ ಮಾಸ್ ಮಸಾಲ ಊಟವನ್ನು ಅಭಿಮಾನಿಗಳಿಗೆ ಉಣಬಡಿಸಿದ್ದಾರೆ.
ಮ್ಯಾಕ್ಸ್ ಸಿನಿಮಾ 6 ದಿನಕ್ಕೆ ಬರೋಬ್ಬರಿ 36 ಕೋಟಿ ಕಲೆಕ್ಷನ್ ಮಾಡಿದೆ. ನ್ಯೂ ಇಯರ್ ಮೊದಲ ದಿನ 4 ಕೋಟಿಗೂ ಹೆಚ್ಚು ದುಡ್ಡು ಮಾಡಿದ್ದು , ಮುಂದಿನ 3-4 ದಿನದಲ್ಲಿ 50 ಕೋಟಿ ಕ್ಲಬ್ ಗೆ ಸೇರುವ ನಿರೀಕ್ಷೆ ಇದೆ.
