ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಇಂದು(ಸೆ.4) ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಒಟ್ಟಾರೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ 17 ಆರೋಪಿಗಳ ವಿರುದ್ಧ ಪೊಲೀಸರು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣ ಕುರಿತಂತೆ ತನಿಖೆ ನಡೆಸಿದ ಪೊಲೀಸರು ಇದೀಗ ನಟ ದರ್ಶನ್, ಪವಿತ್ರಗೌಡ ಸೇರಿದಮತೆ ಎಲ್ಲಾ 17 ಆರೋಪಿಗಳ ವಿರುದ್ಧ 4800 ಪುಟಗಳ ಚಾರ್ಜ್ಶೀಟ್ ಕೋರ್ಟ್ ಗೆ ಸಲ್ಲಿಸಿದ್ದಾರೆ. ತನಿಖಾಧಿಕಾರಿ ಚಂದನ್ ನೇತೃತ್ವದಲ್ಲಿ ಎಸ್ ಪಿಪಿ ಮೂಲಕ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ಮಧ್ಯೆ ದರ್ಶನ್ ವಿರುದ್ಧವಾಗಿ ಪ್ರಬಲ ಸಾಕ್ಷಿಗಳೇ ಲಭ್ಯವಾಗಿವೆ.ಇದರಲ್ಲಿ ಯಾವೆಲ್ಲ ಅಂಶಗಳು ಇರಲಿವೆ ಎನ್ನುವ ಕುರಿತು ಕುತೂಹಲ ಮೂಡಿದೆ. ಒಂದೊಮ್ಮೆ ದರ್ಶನ್ ಅವರನ್ನು ಎ2ನಿಂದ ಎ1 ಆರೋಪಿ ಮಾಡಿದರೆ ಅದು ಪ್ರಮುಖ ಬೆಳವಣಿಗೆ ಆಗಲಿದೆ. ಚಾರ್ಜ್ ಶೀಟ್ ನಲ್ಲಿ 250 ಸಾಕ್ಷಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ನಟ ದರ್ಶನ್ ಎ2, ಪವಿತ್ರಗೌಡ ಎ1 ಎಂದು ಚಾರ್ಚ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಾದ ಬಳಿಕ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವುದು ನಿಯಮ. ಹಾಗಾಗಿ ಸೆಪ್ಟೆಂಬರ್ 9ಕ್ಕೆ 3 ತಿಂಗಳು ಅಂದರೆ ಸಂಪೂರ್ಣವಾಗಿ 90 ದಿನಗಳು ಮುಗಿಯಲಿವೆ. ಇದಕ್ಕೆಲ್ಲ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.