ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಎರಡು ಹಂತದ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.
ಈ ಬಾರಿಯ ದಸರಾ ಮಹೋತ್ಸವಕ್ಕೆ ಒಂದನೇ ಹಂತದಲ್ಲಿ 16 ಎಸ್ ಪಿ, 599 ಇತರೆ ಪೊಲೀಸ್ ಅಧಿಕಾರಿಗಳು, 2381 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಹಾಗೂ 2ನೇ ಹಂತದಲ್ಲಿ ಇಬ್ಬರು ಡಿಐಜಿ, 27 ಎಸ್ ಪಿ, 989 ಇತರೆ ಪೊಲೀಸ್ ಅಧಿಕಾರಿಗಳು, 3981 ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ. 10 ಸಿ ಎ ಆರ್, 33 ಕೆ ಎಸ್ ಆರ್ ಪಿ, 29 ಎ ಎಸ್ ಸಿ, 3 ಬಿ ಡಿ ಡಿ ಎಸ್, ಒಂದು ಗರುಡ ಪಡೆ, ಒಂದು ಐ ಎಸ್ ಡಿ/ಸಿಐಇಡಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಇನ್ನು ಅಕ್ಟೋಬರ್ 3ರಿಂದ 12 ರವರೆಗೆ ಹಲವೆಡೆ ಸಂಚಾರ ಮಾರ್ಗ ನಿರ್ಬಂಧ ಮಾಡಿ, ಬದಲಿ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮತ್ತು ಮೈಸೂರಿನ ನಾಲ್ಕು ಸ್ಥಳಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.