ಸಹಕಾರ ಸಂಸ್ಥೆಯಲ್ಲಿ ಯಾವುದೇ ವ್ಯವಹಾರ ಮಾಡುವಾಗ ಅಡಮಾನದಾರನ ದಿವಾಳಿಯಿಂದಾಗಿ ಅಡಮಾನವು ಪ್ರಶ್ನಿಸತಕ್ಕುದಲ್ಲ. ದಿವಾಳಿಗೆ ಸಂಬಂಧಿಸಿದ ಯಾವುದೇ ಕಾನೂನಿನಲ್ಲಿ ಏನೇ ಇದ್ದರೂ, ಕೃಷಿ ಹಾಗೂ ಗ್ರಾವಿಣ ಅಭಿವೃದ್ಧಿ ಬ್ಯಾಂಕಿನ ಹೆಸರಿನಲ್ಲಿ ಬರೆದುಕೊಡಲಾದ ಅಡಮಾನವನ್ನು ಮೌಲ್ಯಯುಕ್ತವಾದ ಪ್ರತಿಫಲದ ಸಲುವಾಗಿ ಸದುದ್ದೇಶದಿಂದ ಬರೆದು ಕೊಟ್ಟಿರಲಿಲ್ಲವೆಂಬ ಕಾರಣದ ಮೇಲೆ ಅಥವಾ ಅಡಮಾನಕಾರನ ಇತರ ಲೇಣೀದಾರರ ಮೇಲೆ ಕೃಷಿ ಹಾಗೂ ಗ್ರಾವಿಣ ಅಭಿವೃದ್ಧಿ ಬ್ಯಾಂಕಿಗೆ ಪ್ರಾಶಸ್ತ್ಯ ಕೊಡುವ ದೃಷ್ಟಿಯಿಂದ ಬರೆದು ಕೊಡಲಾಗಿತ್ತೆಂಬ ಕಾರಣದ ಮೇಲೆ ಪ್ರಶ್ನಿಸತಕ್ಕುದಲ್ಲ.
ರಿಸೀವರನ ನಿಯುಕ್ತಿ ಮತ್ತು ಅಧಿಕಾರಗಳು.ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅರ್ಜಿಯ ಮೇಲೆ ಮತ್ತು ೮೯ನೇ ಪ್ರಕರಣದಿಂದ ಪ್ರದತ್ತವಾದ ಮಾರಾಟ ಅಧಿಕಾರಗಳನ್ನು ಯಾವ ವಿದ್ಯಮಾನಗಳಲ್ಲಿ ಚಲಾಯಿಸಲ್ಪಡಬಹುದೋ ಆ ವಿದ್ಯಮಾನಗಳಲ್ಲಿ, ಅಡಮಾನದ ಸ್ವತ್ತಿನ ಅಥವಾ ಅವುಗಳ ಯಾವುದೇ ಭಾಗದ ಉತ್ಪನ್ನದ ಮತ್ತು ಆದಾಯದ ಬಗ್ಗೆ ರಿಸೀವರನನ್ನು ಮಂಡಲಿಯು ಲಿಖಿತದ ಆದೇಶದ ಮೂಲಕ ನೇಮಿಸಬಹುದು ಮತ್ತು ಅಂಥ ರಿಸೀವರನು, ಸಂದರ್ಭಾನುಸಾರ, ಸ್ವತ್ತಿನ ಸ್ವಾಧೀನವನ್ನು ತೆಗೆದುಕೊಳ್ಳಲು ಅದರ ಉತ್ಪನ್ನವನ್ನು ಅಥವಾ ಆದಾಯವನ್ನು ವಸೂಲು ಮಾಡಲು, ಅಧಿಕಾರ ಇರುತ್ತದೆ.
Leave a comment