ಬೆಂಗಳೂರು : ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ವಿಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿವೆ. ಸರ್ಕಾರ ಸುಭದ್ರವಾಗಿದ್ದು, ಸಿಎಂ ಕುರ್ಚಿ ವಿಚಾರದಲ್ಲಿ ಹೈ ಕಮಾಂಡ್ ತೀರ್ಮಾನವೇ ಅಂತಿಮ ಎಂದು ಡಿಸಿಎಂ ಡಿಕೆಶಿ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನೇ ಪೂರ್ಣಾವಧಿ ಸಿಎಂ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಮಾತಿಗೆ ಡಿಸಿಎಂ ಡಿಕೆಶಿ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್, ಅವರನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ-ಜೆಡಿಎಸ್ ಹುನ್ನಾರ ನಡೆಸಿವೆ. ದೇಶದ ಎಲ್ಲಾ ವಿಪಕ್ಷಗಳನ್ನ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಹೀಗಾಗಿಯೇ ಸಿಎಂ ಆ ರೀತಿಯ ಹೇಳಿಕೆ ನೀಡಿದ್ದಾರೆ.
ಇನ್ನು, ವಯನಾಡಿನಲ್ಲಿ ಕೈ ಅಭ್ಯರ್ಥಿ ಪ್ರಿಯಾಂಕಾ ವಾದ್ರಾ ಗೆಲುವು ನಿಶ್ಚಿತ. ಪ್ರಿಯಾಂಕಾ ದೇಶವೇ ಎದುರು ನೋಡುತ್ತಿರುವ ಅಗ್ರಗಣ್ಯ ನಾಯಕಿ. ಎಲೆಕ್ಷನ್ ಸೋಲುವ ಭಯದಿಂದ ಕೇರಳ ಸಿಎಂ , ಪ್ರಿಯಾಂಕಾ ವಿರುದ್ಧ ಹಗುರ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ಡಿಕೆಶಿ ಕೌಂಟರ್ ನೀಡಿದರು. ಕಾಂಗ್ರೆಸ್ ಸಮಾಜದ ಎಲ್ಲ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತದೆ. ಎಲ್ಲ ಸಮುದಾಯವನ್ನ ಒಗ್ಗೂಡಿಸಿ ಮುನ್ನಡೆಸುವ ಆಡಳಿತ ನೀಡಲು ಪ್ರಯತ್ನಿಸುತ್ತದೆ ಎಂದು ಡಿಕೆಶಿ ಹೇಳಿದರು.