ಪಿಎಂ ಮೋದಿ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಪ್ರಧಾನ ಮಂತ್ರಿಯ ದೆಹಲಿಯ ಲೋಕ ಕಲ್ಯಾಣ ಮಾರ್ಗದ ನಿವಾಸಕ್ಕೆ ಹೊಸ ಪುಟ್ಟ ಅತಿಥಿಯ ಎಂಟ್ರಿಯಾಗಿದೆ. ಸ್ವತಃ ಪಿಎಂ ಅತ್ಯಂತ ಪ್ರೀತಿಯಿಂದ ಪ್ರೀತಿಯ ಅತಿಥಿಯನ್ನ ಮುದ್ದಾಡಿ ಪಾಲನೆ ಮಾಡಿದ್ದಾರೆ. ಗೋ ಪಾಲನೆಗೆ ಸಾಕಷ್ಟು ಪ್ರಾಶಸ್ತ್ಯ ನೀಡಿರೋ ಮೋದಿ, ಈಗ ಬಂದಿರೋ ಹೊಸ ಕರುವನ್ನ ಪ್ರೀತಿಯಿಂದ ಮುದ್ದಾಡಿ ಕೊರಳಿಗೆ ಹೂವಿನ ಹಾರಹಾಕಿ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಪಿಎಂ ನಿವಾಸಕ್ಕೆ ಬಂದಿರೋ ಪುಟ್ಟ ಕರು ಸದ್ಯ ಎಲ್ಲರ ಮನೆಮಾತಾಗಿದೆ. ತುಂಬಾನೇ ಮುದ್ದಾಗಿರೋ ಕರು ಪಕ್ಕ ಮೋದಿ ಕುಳಿತು ಪೂಜೆ ಮಾಡಿದ್ದಾರೆ. ಪುಟ್ಟ ಕರು ನೋಡಿದ
ಪ್ರತಿಯೊಬ್ಬರಿಗೂ ಅಪ್ಪಿ ಮುದ್ದಾಡುವ ಆಸೆ ಆಗುತ್ತೆ .
ಅಷ್ಟೊಂದು ಮುದ್ದಾಗಿದೆ ಈ ಕರು. ದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ನಿವಾಸದಲ್ಲಿದ್ದ ಹಸು ಕರು ಹಾಕಿದ್ದು ಕಂದು ಬಣ್ಣದ ಕರುವಿನ ಹಣೆಯ ಮೇಲೆ ಬಿಳಿಯ ಬೆಳಕಿನ ಗುರುತು ಇದೆ. ಹೀಗಾಗಿ ಸ್ವತಃ ಪ್ರಧಾನಿಯವರು ಕರುವಿಗೆ ಪ್ರೀತಿಯಿಂದ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದಾರೆ. ಇಂಟರ್ನೆಟ್ ನಲ್ಲಿ ಕರುವಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಕಮೆಂಟ್ಸ್ ಮುಗಿಲುಮುಟ್ಟಿದೆ.