ಪ್ರತಿನಿಧಿ ವರದಿ ಸಾಲಿಗ್ರಾಮ
ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶಾಂತಿಯುತ, ಮಂದಗತಿಯ ಮತದಾನ ನಡೆಯಿತು. ಮಧ್ಯಾಹ್ನದ ವೇಳೆಗೆ ಬಿಸಿಲು ಪ್ರಖರತೆ ಹೆಚ್ಚಾದಂತೆ ಬೆರಳೆಣಿಕೆಯಷ್ಟು ಜನರು ಮಾತ್ರ ಮತಗಟ್ಟೆಯತ್ತ ಮುಖ ಮಾಡಿದರು.
ತಾಲೂಕಿನ ಮಿರ್ಲೆ ಗ್ರಾಮ ಹೊರತುಪಡಿಸಿ ಉಳಿದ ಮತಗಟ್ಟೆಗಳಲ್ಲಿ ಅಷ್ಟಾಗಿ ಸರತಿ ಸಾಲು ಕಂಡುಬರಲಿಲ್ಲ. ಸಂಜೆ ವೇಳೆಗೆ ಎಲ್ಲೆಡೆ ಮತದಾನ ಚುರುಕು ಪಡೆಯಿತು.
ಮಾಜಿ ಶಾಸಕ ಸಾ.ರಾ. ಮಹೇಶ್ ಅವರು ಹುಟ್ಟೂರು ಸಾಲಿಗ್ರಾಮದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಚಿತ್ರಶೀರ್ಷಿಕೆ1):ಸಾಲಿಗ್ರಾಮ ತಾಲೂಕು ಮಿರ್ಲೆ ಗ್ರಾಮದ ಮತಗಟ್ಟೆಯೊಂದರಲ್ಲಿ ಸರತಿ ಸಾಲಲ್ಲಿ ತೆರಳಿ ಹಕ್ಕು ಚಲಾಯಿಸಿದ ಮತದಾರರು.
.2)ಸಾಲಿಗ್ರಾಮದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಮಾಜಿ ಶಾಸಕ ಸಾ.ರಾ.ಮಹೇಶ್.