ಮುಡಾ ವಿಚಾರದಲ್ಲಿ ರಾಜ್ಯಪಾಲರಿಂದ ಸಿಎಂಗೆ ಕಿರುಕುಳ । ಮಾಜಿ ಶಾಸಕ ಸೋಮಶೇಖರ್ ಆರೋಪ
ಬಿಜೆಪಿ, ಜೆಡಿಎಸ್ ಕುತಂತ್ರ ರಾಜಕಾರಣ
ಪ್ರತಿನಿಧಿ ವರದಿ ಮೈಸೂರು
ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಷಯದಲ್ಲಿ ಅನಗತ್ಯವಾಗಿ ರಾಜ್ಯಪಾಲರ ಮೂಲಕ ಕಿರುಕುಳ ನೀಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ರಾಜಕಾರಣವನ್ನು ಮತ್ತು ರಾಜ್ಯಪಾಲರ ಇಬ್ಬಗೆ ನೀತಿಯನ್ನು ವಿರೋಧಿಸಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಮತ್ತು ಮುಖಂಡರ ಒಡಗೂಡಿ ಮೈಸೂರು ನಂಜನಗೂಡು ರಸ್ತೆಯ ಎಪಿಎಂಸಿ ರಿಂಗ್ ರೋಡ್ ಜಂಕ್ಷನ್ ನಲ್ಲಿ ನಾಲ್ಕು ದಿಕ್ಕಿನಲ್ಲೂ ರಸ್ತೆ ತಡೆದು ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಂ.ಕೆ.ಸೋಮಶೇಖರ್, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು ಈ ದೇಶದ ಮಹಾನ್ ಸರ್ವಾಧಿಕಾರಿಗಳು. ಇವರನ್ನು ಬಿಟ್ಟು ಯಾರು ಸಹ ಬೆಳೆಯಬಾರದು ಮತ್ತು ವಿರೋಧಿಸಬಾರದು, ಪ್ರಶ್ನಿಸಬಾರದು ಎಂಬ ಮನಸ್ಥಿತಿ ಹೊಂದಿರುವಂತವರು. ಇವತ್ತಿನ ಕೇಂದ್ರ ಗೃಹಖಾತೆ ಸಚಿವರಾದ ಅಮಿತ್ ಶಾ ಮೂಲತಹ ಒಬ್ಬ ರೌಡಿ ಎಂದು ಸ್ವತಃ ಸಿಬಿಐ ಹಿಂದೆ ತಿಳಿಸಿದೆ.
ಇನ್ನೂ ನರೇಂದ್ರ ಮೋದಿಯ ಅವರು ಗುಜರಾತಿನ ನರಮೇಧ ಹತ್ಯೆಯ ರೂವಾರಿ ಎಂಬುದು ಜಗಜ್ಜಾಹೀರಾಗಿದೆ. ಇವರು ದೇಶದ ಎಲ್ಲ ರಾಜ್ಯಗಳ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಿ ದೇಶವ್ಯಾಪಿ ಬಿಜೆಪಿ ಸರ್ಕಾರವನ್ನು ತರಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ. ಚುನಾವಣೆ ಮೂಲಕ ದಕ್ಷಿಣ ಭಾರತದ ರಾಜ್ಯಗಳನ್ನು ಹಣಿಯಲು ಸಾಧ್ಯವಾಗಿಲ್ಲ ಈಗಾಗೀ ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳಿಗೆ ಕಿರುಕುಳ ಕೊಡುವ ಕೆಲಸ ಪ್ರಾರಂಭಿಸಿದ್ದು ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಇನ್ನೂ ಹಲವಾರು ಕಡೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಅಧಿಕಾರಿಯಿಂದ ಗಣ್ಯರ ಹೆಸರೆಳಿಸುವ ಕುತಂತ್ರ: ಸಿಎಂ ಸೊರೇನ್, ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಮೂಲಕ ಬಂಧಿಸಿದ್ದಾರೆ. ಕರ್ನಾಟಕದಲ್ಲೂ ಸಹ ಪದ್ಮರಾಜ್ ಎಂಬುವ ಅಧಿಕಾರಿಯನ್ನು ಇಡಿ ಅವರು ಬಂಧಿಸಿ ಅವರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರ ಹೆಸರುಗಳನ್ನು ಹೇಳಿಸಲು ಒತ್ತಾಯಿಸಿ ಇಡಿ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಮೂಲಕ ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರವನ್ನು ಮಾಡುತ್ತಿದ್ದಾರೆ. ಹಿಂದೆಯೂ ಸಹ ಆಪರೇಷನ್ ಕಮಲದ ಮೂಲಕ ಸಚಿವರು, ಶಾಸಕರನ್ನು ಕೊಂಡುಕೊಳ್ಳುವ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರವನ್ನು ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾದಲ್ಲಿ ಮಾಡಿದ್ದರು.
ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಜನ ದಂಗೆ ಹೇಳುತ್ತಾರೆ. ದೇಶದಲ್ಲೆಡೆ ಬಾಂಗ್ಲಾದೇಶದಲ್ಲಿ ಹೇಗೆ ಜನ ದಂಗೆ ಎದ್ದಿದ್ದಾರೋ ಅದೇ ಪರಿಸ್ಥಿತಿ ಭಾರತದಲ್ಲೂ ಉಂಟಾಗುವ ಕಾಲ ಬಹಳ ದೂರವೇನಿಲ್ಲ. ಪ್ರಜಾಪ್ರಭುತ್ವ ಸಾವಿನ ಹಂಚಿಗೆ ಬಂದಿದೆ. ಇವರು ಮಾಡುತ್ತಿರುವ ಅನ್ಯಾಯ ಅಕ್ರಮಗಳು ಮುಗಿಲು ಮುಟ್ಟಿದೆ. ಗೋಮುಖ ವ್ಯಾಘ್ರಗಳ ರೀತಿ ಹೊರಗೆ ಒಳ್ಳೆಯವರಾಗಿ ಹೊರಗೆ ಮಾಡಬಾರದ ಕೆಲಸ ಮಾಡಿ ಪ್ರಾಮಾಣಿಕರನ್ನು ಭ್ರಷ್ಟರಂತೆ ಬಿಂಬಿಸಿ ತಾವು ಪ್ರಾಮಾಣಿಕರು ಎನ್ನುವ ರೀತಿ ವರ್ತಿಸುತ್ತಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಶ್ರೀಧರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು,ಕಾಂಗ್ರೆಸ್ ಮುಖಂಡ ರವಿಶಂಕರ್, ಮಾಜಿ ಪಾಲಿಕೆ ಸದಸ್ಯ ಜೆ.ಗೋಪಿ, ಎಂ.ಸುನಿಲ್, ಆರ್.ಎಚ್.ಕುಮಾರ್, ವಿಶ್ವನಾಥ್ (ವಿಶ್ವ), ಮಾಜಿ ಸೆನೆಟ್ ಸದಸ್ಯ ಮಾರ್ಬಳ್ಳಿ ಕುಮಾರ್, ರಮೇಶ್ ರಾಮಪ್ಪ, ಉತ್ತನಹಳ್ಳಿ ಶಿವಣ್ಣ, ಹರೀಶ್, ವಿಜಯ್ ಕುಮಾರ್, ಮೂರ್ತಿ, ಜಗದೀಶ್, ಮಹೇಂದ್ರ, ಮಹಮದ್ ಫಾರೂಕ್, ಭವ್ಯ , ವೀಣಾ, ಇಂದ್ರಮ್ಮ ಚಂದ್ರಕಲಾ, ಮಲ್ಲಾಜಮ್ಮ, ಕಂಸಾಳೆ ರವಿ, ರಮೇಶ್ ರಾವ್, ರಾಘವೇಂದ್ರ ಉಲ್ಲಾಸ್, ರಾಕೇಶ್, ಧರ್ಮೇಂದ್ರ , ಜಯರಾಜ್, ಮಧುರಾಜ್, ಹುಚ್ಚೇಗೌಡ, ಶೇಖರ್, ಕುಮಾರ್ (ಕುಮ್ಮಿ), ಮಲ್ಲೇಶ್ ಮಲ್ಲ, ಚೇತನ್, ಮನು, ಪೈಲ್ವಾನ್ ಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.
ಪೋಟೋ: ರಾಜ್ಯಪಾಲರ ಇಬ್ಬಗೆ ನೀತಿಯನ್ನು ವಿರೋಧಿಸಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಮತ್ತು ಮುಖಂಡರ ಒಡಗೂಡಿ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಯಿತು.
ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿರುವುದು ಸಂವಿಧಾನದ ಉಲ್ಲಂಘನೆ. ವಿಚಾರಣೆ ಮಾಡುವ ಕೆಲಸ ಮಾಡಲೇ ಇಲ್ಲ. ಇದರಿಂದ ಯಾವ ತೊಂದರೆಯೂ ಸಹ ಸಿದ್ದರಾಮಯ್ಯಅವರಿಗೆ ಇಲ್ಲ. ಕೋರ್ಟನಲ್ಲಿ ಇದು ತಿರಸ್ಕಾರ ಆಗಿ ಸತ್ಯಕ್ಕೆ ಜಯ ದೊರಕುವುದು ನಿಶ್ಚಿತ. ಸಿದ್ದರಾಮಯ್ಯಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಪ್ರಭಾವ ಬಳಸಿಲ್ಲ, ಕುಮ್ಮಕ್ಕು ಸಹ ನೀಡಿಲ್ಲ. ಆದ್ದರಿಂದ ಇಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಆಗುವುದಿಲ್ಲ. ಸತ್ಯ ಹೊರಬಂದ ಮೇಲೆ ಜನ ಬಿಜೆಪಿಗೆ ಬುದ್ಧಿ ಕಲಿಸುತ್ತಾರೆ.
– ಎಂ.ಕೆ.ಸೋಮಶೇಖರ್, ಮಾಜಿ ಶಾಸಕ