ಕೋಲಾರ: ನಗರದ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ೪ ವರ್ಷ ಅವಧಿಯ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ (ಡಿ.ಟಿ.ಡಿ.ಎಂ) ಮತ್ತು ಟೊಲ್ ರೂಂ ಮೆಶಿನಿಷ್ಟ್ (ಟಿ.ಆರ್.ಎಂ.) ಒಂದು ವರ್ಷ ಅವಧಿಯ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರದ ಪ್ರಾಂಶುಪಾಲ ವಿಕಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿದಲ್ಲಿ ಮಾತನಾಡಿ, ಈ ಕೋರ್ಸುಗಳ ಕಲಿಕೆಯಿಂದ ವಿವಿಧ ಕಂಪನಿಗಳಲ್ಲಿ ನೇರ ಉದ್ಯೋಗ ಸೌಲಭ್ಯ ಹಾಗೂ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿ. ಕಳೆದ ೨೦೦೯ರಲ್ಲಿ ಪ್ರಾರಂಭಿಸಲಾದ ಈ ಕೋರ್ಸುಗಳ ಪರೀಕ್ಷೆಯಲ್ಲಿ ಒಟ್ಟು ೧೦೦ ಅಂಕಗಳ ಪೈಕಿ ೬೦ ಅಂಕ ಪ್ರಾಯೋಗಿಕ ಪರೀಕ್ಷೆಗೆ ಹಾಗೂ ೪೦ ಅಂಕ ತಾತ್ವಿಕ ಪರೀಕ್ಷೆಗೆ ಇರಲಿದ್ದು, ಒಟ್ಟು ೪ ವರ್ಷದ ತರಬೇತಿಯಾಗಿದೆ ಎಂದರು.
ತರಬೇತಿ ಅವಧಿಯಲ್ಲಿ ೧೨ ರಿಂದ ೧೬ ಸಾವಿರ ರೂ ವರೆಗೆ ಸ್ಟೈಫಂಡ್ ನೀಡಲಾಗುವುದು. ಮೊದಲ ವರ್ಷದ ದಾಖಲಾತಿ ಶುಲ್ಕ ರೂ ೨೨.೫೦೦ ಆಗಿದೆ. ಉಳಿದ ಮೂರು ವರ್ಷಗಳ ಶುಲ್ಕ ರೂ ೧೨,೫೦೦ ಮಾತ್ರವಾಗಿರುತ್ತದೆ. ಉಳಿದ ರೂ ೧೨.೫೦೦ ರೂ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿದ್ಯಾರ್ಥಿವೇತನ ಸೌಲಭ್ಯ ಸಿಗಲಿದೆ. ತರಬೇತಿಯ ಮಧ್ಯದಲ್ಲಿ ಬಿಟ್ಟವರ ಶುಲ್ಕ ಮರು ಪಾವತಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಐ.ಟಿ.ಐ. ವಿಭಾಗದಲ್ಲಿ ಫಿಟ್ಟರ್, ಮೆಕ್ಯಾನಿಕಲ್, ಟರ್ನರ್ ಕೋರ್ಸ್ಗಳಿವೆ, ಪಿಯುಸಿಯಲ್ಲಿ ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎರಡನೇ ವರ್ಷಕ್ಕೆ ನೇರ ಪ್ರವೇಶದ ಅವಕಾಶ ಇರುತ್ತದೆ. ಕಾಲೇಜು ಪ್ರವೇಶ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದರು.
ಅರ್ಜಿ ಸಲ್ಲಿಸಲು ಜೂನ್ ೬ ಕೊನೆಯ ದಿನವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೮೮೬೮೩೯೫೭೪, ೮೫೫೦೦೦೫೧೫೨, ೯೦೭೧೦೬೮೦೧೮, ೦೮೧೫೨-೨೯೫೩೧೭ ಸಂಖ್ಯೆಗಳಲ್ಲಿ ಸಂಪರ್ಕಿಸ ಬಹುದಾಗಿದೆ ಎಂದು ಹೇಳಿದರು,
ಉಪನ್ಯಾಸಕ ಹೇಮಂತ ಕುಮಾರ್ ಮಾತನಾಡಿದರು. ತರಬೇತಿ ಕೇಂದ್ರದ ಮುಖ್ಯಸ್ಥ ಮಧುಸೂದನ್. ಎನ್.ಪಿ, ಉಪನ್ಯಾಸಕರಾದ ಸಂಜಯ್ ಸಿ.ಸಿ. ರಾಜೇಶ್ ಕುಮಾರ್.ಎನ್. ಹಾಗೂ ಪ್ರವೀಣ್ ಎನ್ ಉಪಸ್ಥಿತರಿದ್ದರು.