ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿಗೆ ಆಗಮಿಸಿದ್ದಾರೆ.ಈ ಹಿನ್ನೆಲೆ ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಬಂದಿದ್ದ ಸಿಎಂ ಆಪ್ತ ಹಾಗೂ ಮುಡಾ ಅಧ್ಯಕ್ಷ ಕೆ.ಮರಿಗೌಡ ಅವರನ್ನು ಕಾಂಗ್ರೆಸ್ ಕಾರ್ಯಕರ್ತರೇ ಘೇರಾವ್ ಹಾಕಿ ಹೊರಹಾಕಿದ್ದಾರೆ. ಸಿಎಂ ಇಂದಿನ ಪರಿಸ್ಥಿತಿಗೆ ನೀನೆ ಕಾರಣ ಎಂದು ಅವಾಚ್ಯ ಶಬ್ಧಗಳಿಂದ ಮರಿಗೌಡನನ್ನು ನಿಂದಿಸಿರುವ ಕಾರ್ಯಕರ್ತರು ನಡೆ ನಡೆ ನಿನ್ನ ಭಾಷಣ ನಮಗೆ ಬೇಡ ಎಂದು ವಿಮಾನ ನಿಲ್ಧಾಣದಿಂದ ಹೊರಕಳುಹಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ಜನಪ್ರತಿನಿಧಿಗಳ ನ್ಯಾಯಾಲಯ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಬಂದಿದ್ದ, ಮುಡಾ ಅಧ್ಯಕ್ಷ ಕೆ.ಮರಿಗೌಡ ಅವರನ್ನು ಕಾಂಗ್ರೆಸ್ ಕಾರ್ಯಕರ್ತರೇ ಘೇರಾವ್ ಹಾಕಿದ್ದಾರೆ. ಸಿಎಂ ಆಪ್ತ, ಮುಡಾ ಅಧ್ಯಕ್ಷ ಮರಿಗೌಡ ಅವರಿಗೆ ಕೈ ಕಾರ್ಯಕರ್ತರು ಮುತ್ತಿಗೆ ಹಾಕಿ, ಸಿದ್ದರಾಮಯ್ಯರ ಈ ಸ್ಥಿತಿಗೆ ನೀನೇ ಕಾರಣ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆ.ಮರಿಗೌಡ ತಿಳಿ ಹೇಳಲು ಮುಂದಾದರಾದರು, ಕಾರ್ಯಕರ್ತರು ನಿನ್ನ ಭಾಷಣ ಬೇಡ ಹೊರಡು ಅಂತ ಕೆ. ಮರಿಗೌಡ ಅವರನ್ನು ಬಲವಂತವಾಗಿ ಕಾರು ಹತ್ತಿಸಿ ವಾಪಸ್ ಕಳುಹಿಸಿರುವ ಘಟನೆ ಜರುಗಿದೆ.