ಬನ್ನೂರಿನ ಸಮೀಪದ ಬಿ. ಸೀಹಳ್ಳಿ ಗ್ರಾಮದ ಆದಿಶಕ್ತಿ ಹುಚ್ಚಮ್ಮ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವೀರಪ್ಪಗೌಡ, ಮಹೇಂದ್ರಸಿಂಗ್ ಕಾಳಪ್ಪ, ವನ್ಯಸಿಂಗ್, ವಿರಾಟ್ಸಿಂಗ್, ಸಂತೋಷ್ ಸೇರಿದಂತೆ ಪ್ರಮುಖರು ಇದ್ದರು.