ಬೆಂಗಳೂರು ಅ.19: ಒಂದಡೆ ಸರ್ಕಾರದ ವಿರುದ್ಧ ಪಡಿತರ ವಿತರಕರು (Ration Distributors) ಸರ್ಕಾರದ ವಿರುದ್ಧ ಸಿಡಿದೆದ್ದರೇ ಮತ್ತೊಂದಡೆ ಆಹಾರ ಇಲಾಖೆ (Food Department) ಪ್ರಾಯೋಗಿಕವಾಗಿ ಮನೆ ಮನೆಗೆ ಪಡಿತರ ಸರಬರಾಜು ಮಾಡುತ್ತಿದೆ. ಹೌದು ಬಿಪಿಎಲ್ ಕಾರ್ಡ್ ಹೊಂದಿದ ಅಂಗವಿಕಲರು, 90 ವರ್ಷ ಮೇಲ್ಪಟ್ಟ ಫಲಾನುಭವಿಗಳ ಮನೆಗಳಿಗೆ ಆಹಾರ ಇಲಾಖೆ ಪ್ರಾಯೋಗಿಕವಾಗಿ ಪಡಿತರ ಸರಬರಾಜು ಮಾಡುತ್ತಿದೆ.
ಆಹಾರ ಇಲಾಖೆ ಈಗಾಗಲೆ ಅಂಗವಿಕಲರು ಮತ್ತು 90 ವರ್ಷ ಮೇಲ್ಪಟ್ಟವರ ಮಾಹಿತಿ ಸಂಗ್ರಹಿಸಿದೆ. ಈ ಮನೆಗಳಿಗೆ ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಪಡಿತರ ನೀಡುತ್ತಿದೆ. ಈ ಬಗ್ಗೆ ಜನರ ಅಭಿಪ್ರಾಯ ತಿಳಿದ ನಂತರ ಅಧಿಕೃತವಾಗಿ ಜಾರಿ ಮಾಡಲಿದೆ. ಆಹಾರ ಇಲಾಖೆ ಮೊದಲು ಉಚಿತವಾಗಿ ಪಡಿತರ ಸರಬರಾಜು ಮಾಡಲು ನಿರ್ಧರಿಸಿದ್ದು, ನಂತರ 50 ರೂ. ದರ ನಿಗದಿ ಮಾಡಲು ಆಹಾರ ಇಲಾಖೆ ಪ್ಲ್ಯಾನ್ ಮಾಡಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸದ ಕೊಡಲೇ ಅಧಿಕೃತವಾಗಿ ಹೋಂ ಡೆಲಿವರಿ ಆರಂಭವಾಗುತ್ತದೆ.