ಕ್ಯಾಲಿಫೋರ್ನಿಯಾ, ಏಪ್ರಿಲ್ 15, 2025 : ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯಿಂದ ಜನರು ಭಯಭೀತರಾಗಿದ್ದಾರೆ.
ಭೂಕಂಪದ ಪರಿಣಾಮವಾಗಿ ಸ್ಯಾನ್ ಡಿಯಾಗೋದ ಹೊರಗಿನ ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲುಗಳು ರಸ್ತೆಗಳ ಮೇಲೆ ಬಿದ್ದಿವೆ.
ಸೋಮವಾರ ಭೂಕಂಪ ಸಂಭವಿಸಿದಾಗ ಮನೆಗಳು ಅಲಾಡಿದ್ದು, ಗೋಡೆಗಳು ಬಿರುಕು ಬಿಟ್ಟಿದೆ.
ಬೆಟ್ಟಗಳಿಂದ ಉರುಳಿ ಬಂಡೆಗಳು ಹೆದ್ದಾರಿಗಳಿಗೆ ಬೀಳುವ ಬಗ್ಗೆ ವಾಹನ ಸವಾರರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಭೂಕಂಪ ಸಂಭವಿಸಿದ ವೇಳೆ ಹಲವು ಜನರು ಮನೆಯಿಂದ ಓಡಿ ಬಂದಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಭೂ ವಿಜ್ಞಾನ ಅಧಿಕಾರಿಗಳು ಭೂಕಂಪದ ಕೇಂದ್ರಸ್ಥಾನದ ಸಂಶೋಧನೆ ನಡೆಸಿದ್ದಾರೆ.
