ಬೆಂಗಳೂರು : ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ ಆದ ಬೆನ್ನಲೆ ಅಭ್ಯರ್ಥಿಗಳು ಸೈಲೆಂಟ್ ಆಗಿ ಜನರಿಗೆ ಹಣ ಹಂಚಿ ಓಟ್ ಪಕ್ಕಾ ಮಾಡಿಕೊಳ್ಳಲು ಮುಂದಾಗಿರ್ತಾರೆ. ಆದ್ರೆ ಚುನಾವಣೆ ಆಯೋಗ ಇದರ ಮೇಲೂ ಕಣ್ಣಿಟ್ಟಿದೆ. ಚುನಾವಣೆ ವೇಳೆ ಮತದಾರರಿಗೆ ಆನ್ಲೈನ್ ಮೂಲಕ ಹಣ ರವಾನೆ ಮಾಡಿ ಅವರ ಮತಗಳನ್ನು ಸೆಳೆಯುವ ರಾಜಕಾರಣಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಯಾವುದೇ ರೀತಿಯ ಯುಪಿಐ ಆ್ಯಪ್ಗಳ ಮೂಲಕ ರವಾನೆಯಾಗುವ ಹಣಕಾಸು ವಹಿವಾಟಿನ ಮೇಲೆ ಚುನಾವಣಾ ಆಯೋಗ ನಿಗಾ ವಹಿಸಿದೆ.