ಪ್ರತಿನಿಧಿ ವರದಿ ಗೋಣಿಕೊಪ್ಪ
ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿನ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರ ವಿಜಯ ಪ್ರಕಾಶ್ ಮೋಡಿ ಮಾಡಿದರು.
ಜೈ ಹೋ ಹಾಡಿನ ಮೂಲಕ ಎಲ್ಲಾರನ್ನು ರಂಜಿಸಿದರು. ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಯ ಹಾಡಿಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಪುನೀತ್ ರಾಜ್ಕುಮಾರ್ ಅವರ ಬೊಂಬೆ ಹೇಳುತೈತೆ ಹಾಡಿಗೆ ಎಲ್ಲಾರು ಮೊಬೈಲ್ ಟಾರ್ಚ್ ಪ್ರದರ್ಶನ ಮೂಲಕ ಪ್ರೋತ್ಸಾಹಿಸಿದರು. ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡು ಹೆಚ್ಚು ವಿದ್ಯಾರ್ಥಿಗಳು ಖುಷಿಪಟ್ಟರು. ಕೆಜಿಎಫ್ ನ ರಾಕೀ ಬಾಯ್ ಹಾಡು ಕುಣಿಯುಂತೆ ಮಾಡಿತು. ಸಂಗೀತ ಪ್ರಿಯರು ಮತ್ತು ಹಿರಿಯರು ವಿಜಯ ಪ್ರಕಾಶ್ ಜತೆ ದ್ವನಿಗೂಡಿಸಿ ಅನಂದಿಸಿದರು.
ಜೂ.10 ರಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಬೆಳ್ಳಿಹಬ್ಬ ಆಚರಿಸಲಾಯಿತು. ಕಾಲೇಜು ಸಂಸ್ಥಾಪಕರನ್ನು ಗೌರವಿಸುವ ಮೂಲಕ ಕಾರಣಕರ್ತರನ್ನು ನೆನಪಿಸಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, ಅಂತಾರಾಷ್ಟ್ರೀಯ ಟೆಕ್ನೋ ಕಲ್ಚರಲ್ ಫೆಸ್ಟ್, ಡಿಜೆ ನೈಟ್, ಕಾಲೇಜು ವಾರ್ಷಿಕೋತ್ಸವ, ಮ್ಯೂಸಿಕಲ್ ನೈಟ್ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು.
ಫೋಟೋ 15 ಜಿಕೆಪಿ 01; ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಬೆಳ್ಳಿ ಹಬ್ಬದಲ್ಲಿ ಖ್ಯಾತ ಸಂಗೀತಗಾರ ವಿಜಯ ಪ್ರಕಾಶ್ ತಂಡ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನೀಡಿತು.