ಪ್ರತಿನಿಧಿ ವರದಿ ತಲಕಾಡು
ಜಿಲ್ಲೆಯ ಹಳೇ ತಲಕಾಡು ಹಸ್ತಿಕೇರಿ ಮಠದ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಗೃಹಸ್ಥರಾಗಲು ಬಯಸುವವರು, ಬಡವರು, ಹಿಂದುಳಿದವರು, ದೀನದಲಿತರು ಮತ್ತು ಜಾತಿ-ಮತ ಪಂಥಗಳ ಬೇಧವಿಲ್ಲದೆ ಇಲ್ಲಿ ನಡೆಯುವ ಉಚಿತ ವಿವಾಹಕ್ಕೆ ನೊಂದಣಿ ಮಾಡಿಸಿಕೊಳ್ಳಹುದು, ವರನಿಗೆ 21ವರ್ಷ ವಧುವಿಗೆ 18ವರ್ಷ ತುಂಬಿರಬೇಕು.
ಬಾಲ್ಯ ವಿವಾಹ ಹಾಗೂ ಎರಡನೇ ವಿವಾಹಕ್ಕೆ ಇಲ್ಲಿ ಅವಕಾಶವಿಲ್ಲ. ವಧು ವರನ ವಯಸ್ಸಿನ ಧೃಡೀಕರಣ ಪತ್ರ ತಂದಿರಬೇಕು, ವರನಿಗೆ ಶರ್ಟು, ಪಂಚೆ, ಶಲ್ಯ, ಪೇಟ, ಛತ್ರಿ, ಪಾದರಕ್ಷೆ, ಕೈಗಡಿಯಾರ ಮತ್ತು ವಧುವಿಗೆ ಚಿನ್ನದ ಮಾಂಗಲ್ಯ, ಕಾಲುಂಗರ, ಕಾಲಿನ ಚೈನು, ಸೀರೆ, ಕುಪ್ಪಸ, ಬಾಗಿನ, ಕೈಗಡಿಯಾರ ಇತ್ಯಾದಿ ನೀಡಲಾಗುತ್ತದೆ.
ವೇದಘೋಷ ಮಂಗಳ ವಾದ್ಯ ಶುಭ ಲಗ್ನ ಮುಹೂರ್ತದಲ್ಲಿ, ಗುರು ಹಿರಿಯರು, ತಂದೆ ತಾಯಿ ಹಾಗು ದಾನಿಗಳ ಆಶೀರ್ವಾದದಲ್ಲಿ ಸುಗ್ರಾಸ ಭೋಜನದೊಂದಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಹಳೇತಲಕಾಡು ಹಸ್ತಿಕೇರಿ ಮಠದ ಅಧ್ಯಕ್ಷ ಡಾ.ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ಅಥವಾ ಈ ಸಂಖ್ಯೆಗೆ 9141730268, 9980222130, 9980888825, 9141653421 ಸಂಪರ್ಕಿಸಲು ಕೋರಿದೆ.