ಶಾಲೆಗೆ ಕಂಪ್ಯೂಟರ್, ಪ್ರಿಂಟರ್ ಕೊಡುಗೆ
ಬೆಟ್ಟದಪುರ: ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲೆ ವಿಭಾಗಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿ ಎಚ್.ಜಿ ಮಧುಸೂದನ್ ಎಂಬುವರು ವೈಯಕ್ತಿಕವಾಗಿ ಕಂಪ್ಯೂಟರ್ ಹಾಗೂ ಪ್ರಿಂಟರ್ ಅನ್ನು ಸೋಮವಾರ ಕೊಡುಗೆಯಾಗಿ ನೀಡಿದರು.
ಈ ವೇಳೆ ಎಚ್.ಜಿ ಮಧುಸೂದನ್ ಅವರನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಕಾವ್ಯ ಜನಾರ್ದನ್, ಸದಸ್ಯ ಪ್ರಸನ್ನ, ಮುಖ್ಯಶಿಕ್ಷಕ ಕೆ.ಸಿ ಸತೀಶ್, ಶಿಕ್ಷಕರಾದ ವಿದ್ಯಾಶ್ರೀ, ಶಾಜೀಯ ಪರ್ವೀನ್, ಸಚಿನ್, ಚಂದ್ರಶೇಖರ, ನಾಗರತ್ನ, ರುಕ್ಮಿಣಿ, ಪ್ರಿಯಾದರ್ಶಿನಿ, ಜಬೀನಾ ಬೇಬಿ, ಯಶೋಧಮ್ಮ ಇತರರು ಇದ್ದರು.