ದೇವನಹಳ್ಳಿ .18: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬ್ಯಾಂಕಾಕ್, ಕೊಲಂಬೋ ಮತ್ತು ಮಸ್ಕಟ್ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಕೆಜಿಗೂ ಅಧಿಕ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಬ್ಯಾಂಕಾಕ್ನಿಂದ ಮೂವರು ಪುರುಷರು, ಕೊಲಂಬೋದ ಇಬ್ಬರು ಮಹಿಳೆಯರು ಮತ್ತು ಮಸ್ಕಟ್ನ ಒರ್ವ ಪ್ರಯಾಣಿಕ ಶರ್ಟ್ ಮತ್ತು ಒಳ ಉಡುಪಿನಲ್ಲಿ ಚಿನ್ನದ ಕಟ್ ಫಿಸ್ಗಳನ್ನು ಅಡಗಿಸಿಟ್ಟುಕೊಂಡು ತಂದಿದ್ದರು.
ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಮೂರು ಪ್ರಕರಣಗಳಿಂದ 1,26,58, 618 ರೂ. ಮೌಲ್ಯದ 2 ಕೆಜಿ 79 ಗ್ರಾಂ ತೂಕದ ಚಿನ್ನ ಪತ್ತೆಯಾಗಿದೆ. ಮೂರು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಅಧಿಕಾರಿಗಳು ಪಡೆದು ವಿಚಾರಣೆ ನಡೆಸುತ್ತಿದ್ದಾರೆ.