ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿದ್ದಪ್ಪ ಕಳೆದ ವರ್ಷ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಜ್ಯೂನಿಯರ್ ರೆಬೆಲ್ಸ್ಟಾರ್ ಖ್ಯಾತಿಯ ಅಭಿಷೇಕ್ ಅಂಬರೀಶ್ ಅವರು ಅಪ್ಪನಾಗುವ ಸಂಭ್ರಮದಲ್ಲಿದ್ದಾರೆ. ಮದುವೆಯಾಗಿ ಒಂದು ವರ್ಷದಲ್ಲಿಯೇ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲು ರೆಡಿಯಾಗಿದ್ದಾರೆ .ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವಾ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿ ವಿಚಾರವನ್ನು ಕುಟುಂಬಕ್ಕೆ ತಿಳಿಸಿ ಗ್ರೀನ್ ಸಿಗ್ನಲ್ ಪಡೆದು ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಆಗಿದ್ದರು.
ಇದೀಗ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ದಂಪತಿ ಅಪ್ಪ-ಅಮ್ಮ ಆಗುತ್ತಿದ್ದಾರೆ.ಅಂಬಿ ಕುಟುಂಬದಲ್ಲಿ ಇದೇ ವಾರ ಅವಿವ ಬಿದ್ದಪ್ಪ ಅವರಿಗೆ ಅದ್ಧೂರಿಯಾಗಿ ಸೀಮಂತ ಮಾಡಲು ಪ್ಲಾನ್ ಮಾಡಲಾಗಿದ್ದು, ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಇದೇ ವಾರ ಅದ್ಧೂರಿಯಾಗಿ ಅಂಬಿ ನಿವಾಸದಲ್ಲಿ ಸೀಮಂತ ಕಾರ್ಯ ನೇರವೇರಲಿದೆ ಎನ್ನಲಾಗ್ತಿದೆ.ರೆಬೆಲ್ ಸ್ಟಾರ್ ಸೊಸೆ ಗರ್ಭಿಣಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಂಬಿ ಅಭಿಮಾನಿಗಳು ಮತ್ತೆ ರೆಬೆಲ್ಸ್ಟಾರ್ ಹುಟ್ಟಿಬರಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಗಂಡು ಖ್ಯಾತಿಯ ನಟ ರೆಬೆಲ್ಸ್ಟಾರ್ ಅಂಬರೀಶ್ ಅವರು 2018ರ ನವೆಂಬರ್ನಲ್ಲಿ ನಿಧನರಾಗಿದ್ದರು. ಅಂಬರೀಶ್ ನಿಧನದ 5 ವರ್ಷದ ನಂತರ ಕಳೆದ ವರ್ಷ ಅಭಿಷೇಕ್ ಅಂಬರೀಶ್ ಪ್ರೀತಿಸಿದ ಹುಡುಗಿಯನ್ನು ವರಿಸಿದ್ದರು. ಈಗ ಅಂಬರೀಶ್ ಅವರ ಸೊಸೆ ಗರ್ಭಿಣಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಂಬಿ ಅಭಿಮಾನಿಗಳು ಮತ್ತೆ ರೆಬೆಲ್ಸ್ಟಾರ್ ಹುಟ್ಟಿಬರಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.