ಪ್ರತಿನಿಧಿ ವರದಿ ಮಡಿಕೇರಿ
ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಏಳನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ ಟೂರ್ನಿಯಲ್ಲಿ ಕೊಳಂಬೆ ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.
ಕೊಳಂಬೆ ತಂಡವು ಎಡಿಕೇರಿ ತಂಡವನ್ನು 3- 2 ಗೋಲುಗಳಿಂದ ಟೈ ಬ್ರೇಕರ್ನಲ್ಲಿ ಮಣಿಸಿ ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆಯಿತು.
ಎಡಿಕೇರಿಗೆ ಚೆರಿಯಮನೆ ವಿರುದ್ಧ 6- 1 ಗೋಲುಗಳ ಜಯ ದೊರೆಯಿತು. ಚೆರಿಯಮನೆ ಆಟಗಾರ ಚೇತನ್ 1, ಎಡಿಕೇರಿ ಪರ ಗಗನ್ 3, ರೋಷನ್, ಪ್ರಶಾಂತ್ ಹಾಗೂ ವೇದಾಂತ್ ತಲಾ 1 ಗೋಲು ಹೊಡೆದರು.
ಕೊಳಂಬೆ ತಂಡಕ್ಕೆ ಪರಿಚನ ವಿರುದ್ಧ 3- 2 ಗೋಲುಗಳ ಗೆಲುವು ದಕ್ಕಿತು. ಪರಿಚನ ಪರ ದೀಕ್ಷೆ ಹಾಗೂ ಲೋಕೇಶ್, ಕೊಳಂಬೆ ಪರ ಜಗನ್, ಕವನ್ ಹಾಗೂ ಗಿರೀಶ್ ತಲಾ 1 ಗೋಲು ಬಾರಿಸಿದರು.
ಬಿದ್ರುಪಣೆ ತಂಡ ಟೈಬ್ರೇಕರ್ನಲ್ಲಿ ಪಾರೇರವನ್ನು 2- 1 ಗೋಲುಗಳಿಂದ ಗೆದ್ದು ಬೀಗಿತು. ಬಡುವಂಡ್ರ ತಂಡವು ಕೋಟೆರವನ್ನು 5- 0 ಗೋಲುಗಳಿಂದ ಸೋಲಿಸಿತು. ಬಡುವಂಡ್ರ ಪರ ದುಶಾಂತ್ 2, ಭರತ್ 2 ಗೋಲ್, ಸುಜಯ್ 1 ಗೋಲು ಹೊಡೆದರು.
ನಂಗಾರು ತಂಡಕ್ಕೆ ಚೆಟ್ಟಿಮಾಡ ವಿರುದ್ಧ 3- 1 ಗೋಲುಗಳ ಜಯ ಸಿಕ್ಕಿತು. ನಂಗಾರು ಪರ ಅಭಿಷೇಕ್, ಚೇತು ಹಾಗೂ ಮೋಹಿತ್, ಚೆಟ್ಟಿಮಾಡ ಪರ ಹರ್ಷ ತಲಾ ಒಂದೊಂದು ಗೋಲು ಬಾರಿಸಿದರು. ಕಾಂಗಿರವು ಬಿಳಿಯಂಡ್ರವನ್ನು 3- 0 ಗೋಲುಗಳಿಂದ ಮಣಿಸಿತು. ಕಾಂಗೀರ ಪರ ಯತಿನ್, ನಕುಲ್ ಹಾಗೂ ಚೇತನ್ ತಲಾ 1 ಗೋಲು ಸೇರಿಸಿದರು.
ಬೊಳ್ತಾಜೀರ ತಂಡಕ್ಕೆ ಹುದೇರಿ ವಿರುದ್ಧ 6- 0 ಗೋಲುಗಳ ಜಯ ಸಿಕ್ಕಿತು. ಬೋಳ್ತಾಜಿರ ಪೃಥ್ವಿ 3, ಗಗನ್ 2, ಸಚಿನ್ 1 ಗೋಲು ಹೊಡೆದರು. ಕಡ್ಯದ ತಂಡವು ಕಾನಡ್ಕವನ್ನು 5- 0 ಗೋಲುಗಳಿಂದ ಸೋಲಿಸಿತು. ಕಡ್ಯದ ವೈಶಾಕ್ 3, ಕಾರ್ತಿಕ್ 2 ಗೋಲು ಸಿಡಿಸಿದರು. ಬೈಲೇರ ತಂಡಕ್ಕೆ ಮಗೇರನ ವಿರುದ್ಧ 3- 1 ಗೋಲುಗಳ ಜಯ ಸಿಕ್ಕಿತು. ಮಗೇರನ ಅಜಿತ್ 1, ಬೈಲೇರ ಹರ್ಷಿತ್ 2, ರೋಹಿತ್ 1 ಗೋಲು ದಾಖಲಿಸಿದರು.
ಫೋಟೋ 22 ಎಂಡಿಕೆ 06 ; ಗೌಡ ಫುಟ್ಬಾಲ್