ಪ್ರತಿನಿಧಿ ವರದಿ ದೇವನಹಳ್ಳಿ
ಇತ್ತೀಚೆಗೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಗೆ ಸೇರಿದ ಪೂಜನಹಳ್ಳಿ ಗ್ರಾಮದ ಅಂಗನವಾಡಿ ಜಾಗವನ್ನ ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಕನ್ನಮಂಗಲ ಗ್ರಾಪಂ ಸದಸ್ಯ ಸೋಮಶೇಖರ್ ಆರೋಪ ಮಾಡಿದ್ದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿ ಪತ್ರಿಕಾಗೋಷ್ಠಿ ನಡೆಸಿ ಗ್ರಾಪಂ ಸದಸ್ಯ ಸೋಮಶೇಖರ್ ಅಂಗನವಾಡಿ ಜಾಗವನ್ನ ಗೋವಿಂದಪ್ಪ ಎಂಬುವವರಿಗೆ ಖಾತೆ ಮಾಡಿಕೊಡುತ್ತೇನೆ ಎಂದು ಹೇಳಿ, 5 ಲಕ್ಷಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಗೋವಿಂದಪ್ಪ ಮತ್ತು ಮುರಳಿ ಎಂಬುವವರು ಪತ್ರಿಕಾಗೋಷ್ಠಿ ನಡೆಸಿದ್ದರು ಇದೀಗ ಪ್ರತಿಕ್ರಿಯಿಸಿರುವ ಗ್ರಾಪಂ ಸದಸ್ಯ ಸೋಮಶೇಖರ್ ಹಣಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತು ಪಡಿಸಿದರೆ ನನ್ನ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಸೋಮಶೇಖರ್, ಕನ್ನಮಂಗಲ ಗ್ರಾಪಂ ಪಿಡಿಒ ಶ್ರೀನಿವಾಸ್ ಮಾಡಿರುವ ಅಕ್ರಮವನ್ನು ತನಿಖೆ ಮಾಡಿ ಎಂದು ನಾನು ಹೋರಾಟ ಮಾಡುತ್ತಿದ್ದೇನೆ. ಆದರೆ ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಕ್ರಮದ ಬಗ್ಗೆ ಪ್ರಶ್ನೆ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹಕ್ಕು ಇದೆ. ಪೂಜನಹಳ್ಳಿ ಗ್ರಾಮದಲ್ಲಿ ಅಕ್ರಮ ನಡೆದರೆ ಪೂಜನಹಳ್ಳಿ ಗ್ರಾಮಸ್ಥರೇ ಪ್ರಶ್ನೆ ಹಾಕಬೇಕು, ಬೇರೆ ಯಾರು ಪ್ರಶ್ನೆ ಮಾಡಬಾರದು ಎಂದು ಎಲ್ಲೂ ಇಲ್ಲ. ನಾನು ಕನ್ನಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾಯಿತ ಪ್ರತಿನಿಧಿ ಆಗಿದ್ದೇನೆ. ನಮ್ಮ ಗ್ರಾಮ ಪಂಚಾಯತಿಯಲ್ಲಿ ಅಕ್ರಮ ನಡೆದರೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಲೇಬೇಕು.ಕನ್ನಡ ಪರ ಸಂಘಟನೆಗಳಾಗಲಿ, ದಲಿತ ಪರ ಸಂಘಟನೆಗಳಾಗಲಿ ಯಾವುದೇ ಸಂಘಟನೆಗಳಾಗಲಿ ಆಡಳಿತ ವ್ಯವಸ್ಥೆಯಲ್ಲಿ ಅಕ್ರಮ ಕಾಣಿಸಿ ಆರೋಪಗಳು ಬಂದಾಗ ಸಂಘಟನೆಗಳು ಅದನ್ನು ತನಿಖೆ ಅಗ್ರಹಿಸಬೇಕೇ ಹೊರತು ಆರೋಪ ಮಾಡಿದವರ ವಿರುದ್ಧ ಹೋರಾಟ ಮಾಡುವುದು ಸಮಂಜಸವಲ್ಲ. ಇನ್ನೂ ಈ ಪ್ರಕರಣದಲ್ಲಿ ದಲಿತರ ವಿರುದ್ಧ ಶೋಷಣೆ ಆಗುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ. ನಾನು ಅಧಿಕಾರಿಗಳು ಮಾಡಿರುವ ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದ್ದೇನೆ ಹೊರತು ದಲಿತರ ವಿರುದ್ಧ ನಾನು ಎಲ್ಲೂ ಮಾತನಾಡಿಲ್ಲ. ಸರ್ಕಾರಿ ಅಂಗನವಾಡಿ ಜಾಗ ಎಂಬುವುದಕ್ಕೆ ನಾನು ಎಲ್ಲಾ ರೀತಿಯ ದಾಖಲಾತಿಗಳನ್ನು ಈಗಾಗಲೇ ನೀಡಿದ್ದೇನೆ. ಸರ್ಕಾರಿ ಜಾಗವನ್ನು ಮತ್ತೆ ಸರ್ಕಾರಕ್ಕೆ ದಾನ ಮಾಡುವ ಪ್ರಮೇಯ ಬರುವುದಿಲ್ಲ. ಇದೇ ಅಕ್ರಮ ನಡೆದಿದೆ ಎಂಬುವುದು ನನ್ನ ಪ್ರಶ್ನೆ. ಈ ಬಗ್ಗೆ ತನಿಖೆ ನಡೆಯಲಿ ಸತ್ಯಾಸತ್ಯತೆ ಹೊರ ಬರಲಿ. ಇಷ್ಟೆಲ್ಲಾ ನಡೆದರು ಉನ್ನತ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.ಇನ್ನಾದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಒ ಅವರು ಪಿಡಿಒ ಶ್ರೀನಿವಾಸ್ ನನ್ನು ಅಮಾನತು ಮಾಡಿ ಒಂದು ತಂಡ ರಚನೆ ಮಾಡಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ತಿಳಿಸಿದರು.
9ಡಿಎಚ್ಎಲ್ ಪಿ -೧
ಕನ್ನಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್
9ಡಿಎಚ್ಎಲ್ ಪಿ -೨
ಕನ್ನಮಂಗಲ ಗ್ರಾಮ ಪಂಚಾಯಿತಿ.