ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಅವಹೇಳನಕಾರಿ ಶಬ್ದ ಬಳಸಿದ್ದನ್ನು ರಾಜ್ಯದ ಪ್ರಮುಖ ನಾಯಕರು ತೀವ್ರವಾಗಿ ಟೀಕಿಸುತ್ತಿದ್ದಾರೆ. ಇಂದು ನಗರದ ಹೋಟೆಲೊಂದರಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ನಾಯಕರು ಯತೀಂದ್ರ ಬಳಸಿರುವ ಭಾಷೆಯ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು. ಸಂಸದ ಡಿವಿ ಸದಾನಂದ ಗೌಡ ಯತೀಂದ್ರರನ್ನು ಖಂಡಿಸಿದ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಾನೇನಂತೆ? ಎಂದು ಪರೋಕ್ಷವಾಗಿ ಯತೀಂದ್ರರನ್ನು ಗೂಂಡಾ ಎಂದರು.