ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ ಇಂದು ಬೆಳಿಗ್ಗೆ ಅಧಿಕೃತ ಚಾಲನೆ ದೊರತಿದೆ. ಖ್ಯಾತ ಸಾಹಿತಿ ಹಂ ಪ ನಾಗರಾಜಯ್ಯ ಸೇರಿದಂತೆ ಸಿಎಂ, ಡಿಸಿಎಂ ಮತ್ತು ಸಚಿವರುಗಳು ನಾಡಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಿದ್ದಾರೆ. ಇನ್ನು ದಸರಾ ಅಂಗವಾಗಿ ನನಗರದ ವಿವಿಧೆಡೆ ಹಲಾವರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಕೂಡ ಇಂದೇ ಉದ್ಘಾಟನೆಗೊಂಡಿದೆ.
ದಸರಾ ಚಲನಚಿತ್ರೋತ್ಸವ: ಕೆಎಸ್ಒ ಯು ನ ಘಟಿಕೋತ್ಸವ ಭವನದಲ್ಲಿ ನಡೆದ ದಸರಾ ಚಲನಚಿತ್ರೋತ್ಸವವನ್ನು ಸ್ಯಾಂಡಲ್ ವುಡ್ ನ ಹಿರಿಯ ನಟ ರಮೇಶ್ ಅರವಿಂದ್ ಉದ್ಘಾಟನೆ ಮಾಡಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವರಾದ ಹೆಚ್ ಸಿ ಮಹದೇವಪ್ಪ, ಕೆ ಎಚ್ ಮುನಿಯಪ್ಪ, ಸಚಿವ ಕೆ ವೆಂಕಟೇಶ್, ನಟಿಯಾರಾದ ಸಪ್ತಮಿಗೌಡ, ಶರಣ್ಯ, ಹಾಗೂ ದ್ವಾರಕೀಶ್ ಪುತ್ರ ಯೋಗೇಶ್ ಸೇರಿದಂತೆ ಸ್ಥಳೀಯ ಶಾಸಕರು, ಅಧಿಕಾರಿಗಳು ಭಾಗಿಯಾಗಿದ್ದಾರೆ.
ದಸರಾ ಆಹಾರ ಮೇಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಹಾರ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿಜ್ಯೋತಿ ಬೆಳಗಿಸುವ ಮೂಲಕ ಆಹಾರ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಈ ವೇಳೆ ಸಚಿವರಾದ ಕೆ ಎಚ್ ಮುನಿಯಪ್ಪ, ಡಾ ಎಚ್ ಸಿ ಮಹದೇವಪ್ಪ , ಎಂಎಲ್ಸಿ ಗಳಾದ ಡಾ ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ ಸೇರಿದಂತೆ ಇತರ ಪ್ರಮುಖರು ಭಾಗಿಯಾಗಿದ್ದರು.
ದಸರಾ ಫಲಪುಷ್ಪ ಪ್ರದರ್ಶನ: ಕುಪ್ಪಣ್ಣ ಪಾರ್ಕ್( ನಿಶಾದ್ ಬಾಗ್) ನಲ್ಲಿ ಆಯೋಜಿಸಲಾಗಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಉದ್ಘಾಟನೆ ಮಾಡಿದ್ದಾರೆ.
ಈ ವೇಳೆ ಸಿಎಂ ಸಿದ್ದರಾಮಯ್ಯಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತರೆಡ್ಡಿ, ಪುಷ್ಪಾ ಅಮರನಾಥ್ ಸೇರಿದಂತೆ ಹಲವರು ಸಾಥ್ ನೀಡಿದರು.