ಮೈಸೂರು, ನವೆಂಬರ್ 14, 2024: ಮೈಸೂರಿನ ಉದಯಗಿರಿ ಪೊಲೀಸರು ಗಾಂಜಾ ಮಾರಾಟ ದಂಧೆಯನ್ನ ರೇಡ್ ಮಾಡಿ ಭೇದಿಸಿದ್ದಾರೆ. ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು,154 ಕೆ ಜಿ ಗಾಂಜಾ ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಅಕ್ರ
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಮತ್ತೊರ್ವನಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಸೈಯದ್ ವಾಸೀಂ ಹಾಗೂ ಯಾಸ್ಮಿನ್ ತಾಜ್ ರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲ್ಯಾಣಗಿರಿಯ ಕೆ ಹೆಚ್ ಬಿ ಕಾಲೋನಿಯ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾ ಸೀಜ್ ಮಾಡಲಾಗಿದೆ.
8 ಚೀಲದಲ್ಲಿ ತುಂಬಿರಿಸಲಾಗಿದ್ದ ಗಾಂಜಾ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ಮಾಡಿರುವ ಉದಯಗಿರಿ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
