ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತ ಈ ಬಾರಿ ಪದಕದಲ್ಲಿ ‘ಟಾರ್ಗೆಟ್ 100’ ತಲುಪುವುದು ಖಚಿತವಾಗಿದೆ. ಪದಕ ಬೇಟೆ ನಾಗಾಲೋಟ ಮುಂದುವರಿಸಿರುವ ಭಾರತೀಯರು ಶನಿವಾರ ಮತ್ತೆ ಸೇರಿ 17 ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದು, ಒಟ್ಟಾರೆ ಪದಕ ಗಳಿಕೆ 25 ಚಿನ್ನ ಸೇರಿ 99ಕ್ಕೆ ಹೆಚ್ಚಳವಾಗಿದೆ. ಕೊನೆ ದಿನವಾದ ಶನಿವಾರ ಭಾರತಕ್ಕೆ ಕೆಲ ಸ್ಪರ್ಧೆಗಳಲ್ಲಿ ಪದಕ ಖಚಿತವಾಗಿದ್ದು, 100ರ ಗಡಿ ದಾಟಲಿದೆ. ಸದ್ಯ ಭಾರತ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಪ್ರಾಬಲ್ಯ ಮುಂದುವರಿಸಿರುವ ಚೀನಾ 195 ಚಿನ್ನ ಸೇರಿ ಬರೋಬ್ಬರಿ 492 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಶುಕ್ರವಾರ ಭಾರತಕ್ಕೆ 7 ಚಿನ್ನದ ಪದಕ ಒಲಿಯಿತು. ಬ್ಯಾಡ್ಮಿಂಟನ್ನಲ್ಲೇ 4 ಬಂಗಾರ ಭಾರತದ ಪಾಲಾಯಿತು. ಪ್ಯಾರಾಲಿಂಪಿಕ್ ಚಾಂಪಿಯನ್ ಪ್ರಮೋದ್ ಭಗತ್ ಪುರುಷರ ಸಿಂಗಲ್ಸ್ ಎಸ್ಎಲ್3 ವಿಭಾಗದಲ್ಲಿ, ತುಳಸ್ಮತಿ ಮಹಿಳಾ ಸಿಂಗಲ್ಸ್ ಎಸ್ಯು5 ವಿಭಾಗದಲ್ಲಿ, ನಿತೇಶ್-ತರುಣ್ ಪುರುಷರ ಡಬಲ್ಸ್ ಎಸ್ಎಲ್3-ಎಸ್ಎಲ್ಎಫ್4 ವಿಭಾಗದಲ್ಲಿ ಚಿನ್ನ ಸಂಪಾದಿಸಿದರು. 1500 ಮೀ. ಟಿ28 ವಿಭಾಗದಲ್ಲಿ ರಮನ್ ಶರ್ಮಾ ಏಷ್ಯನ್ ದಾಖಲೆ(4 ನಿಮಿಷ 20.80 ಸೆಕೆಂಡ್) ಯೊಂದಿಗೆ ಚಿನ್ನ ಗೆದ್ದರು. ಪುರುಷರ ಲಾಂಗ್ಜಂಪ್ ಟಿ64 ವಿಭಾಗದಲ್ಲಿ ಧರ್ಮರಾಜ್ ಬಂಗಾರದ ಸಾಧನೆ ಮಾಡಿದರು.