ಬೆಂಗಳೂರು: ನಗರದಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದ್ದು, ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಬಾಮೈದ ಪ್ರದೀಪ್ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅಶ್ವತ್ಥಮ್ಮ ಪತಿ ಅಂಬಿಕಾಪತಿ ಸಹೋದರ ಪ್ರದೀಪ್ಗೆ ಸೇರಿದ ಫ್ಲ್ಯಾಟ್ನ ಬೆಡ್ ರೂಮ್ನಲ್ಲಿ 23 ಬಾಕ್ಸ್ನಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಐಟಿ ಅಧಿಕಾರಿಗಳು ಪ್ರದೀಪ್ನನ್ನು ವಿಚಾರಣೆ ನಡೆಸುತ್ತಿದ್ದಾರೆ.