ಮೈಸೂರು: ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ಕೆಲಸ. ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ ಕುಮಾರಸ್ವಾಮಿ ಇದುವರೆಗೂ ಒಂದು ದಾಖಲೆ ಬಿಡುಗಡೆ ಮಾಡಲಿಲ್ಲ. ಜೆಡಿಎಸ್, ಬಿಜೆಪಿ ವಿರುದ್ಧ ಮತ ನೀಡುವ ಮೂಲಕ ಚನ್ನಪಟ್ಟಣ ಕ್ಷೇತ್ರದ ಜನತೆ ಕುಮಾರಸ್ವಾಮಿಯವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿಂದು ಸುದಿಗೋಷ್ಟಿ ನಡೆಸಿ ಮಾತನಾಡಿದ ಎಂ ಲಕ್ಷ್ಮಣ್, ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ಕೆಲಸ. ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ ಕುಮಾರಸ್ವಾಮಿ ಇದುವರೆಗೂ ಒಂದು ದಾಖಲೆ ಬಿಡುಗಡೆ ಮಾಡಲಿಲ್ಲ. ಜೆಡಿಎಸ್, ಬಿಜೆಪಿ ವಿರುದ್ಧ ಮತ ನೀಡುವ ಮೂಲಕ ಚನ್ನಪಟ್ಟಣ ಕ್ಷೇತ್ರದ ಜನತೆ ಕುಮಾರಸ್ವಾಮಿಯವರಿಗೆ ತಕ್ಕ ಪಾಠ ಕಲಿಸುತ್ತಾರೆ.ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನೇ ಸಿ ಪಿ ಯೋಗೇಶ್ವರ್ ಹೇಳಿರೋದು ಎಂದರು.
ಬಿಜೆಪಿಯವ್ರು ಅಧಿಕಾರಕ್ಕಾಗಿ ಯಾವ ಹಂತಕ್ಕಾದ್ರೂ ಹೋಗುತ್ತಾರೆ!
ಈಗಾಗಲೇ ಹಲವು ರಾಜ್ಯಗಳಲ್ಲಿ ಚುನಾವಣೆಗಳು ಬರುತ್ತಿವೆ.ರಾಜ್ಯದಲ್ಲಿಯೂ ಬೈ ಎಲೆಕ್ಷನ್ ನಡೆಯುತ್ತಿದೆ.ಚುನಾವಣೆ ವೇಳೆ ಸಿಎಂ ಗೆ ನೋಟಿಸ್ ನೀಡೋದು. ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡುವ ಸಾಧ್ಯತೆ ಇದೆ.ಬಿಜೆಪಿಯವರ ಮನಸ್ಥಿತಿ ಏನೆಂಬುದನ್ನು ಇದು ತಿಳಿಸುತ್ತದೆ.ಸಾವಿರಾರು ಕೋಟಿ ಹಗರಣದಲ್ಲಿ ಭಾಗಿಯಾಗಿರೋರು ಬಿಜೆಪಿಗೆ ಸೇರ್ಪಡೆಯಾದ್ರೇ ಕ್ಲೀನ್ ಚಿಟ್ ಕೊಡಿಸುವ ಕೆಲಸ ಆಗುತ್ತದೆ.ಅಜಿತ್ ಪವಾರ್, ಚಂದ್ರಬಾಬು ನಾಯ್ಡು ಸೇರಿದಂತೆ ಹಲವರ ಹಗರಣಗಳಿಗೆ ಕ್ಲೀನ್ ಚಿಟ್ ನೀಡಲಾಗಿದೆ.ಬಿಜೆಪಿಯವರು ದೇಶದಲ್ಲಿ ಅಧಿಕಾರಕ್ಕಾಗಿ ಯಾವುದೇ ಹಂತಕ್ಕೆ ಬೇಕಾದ್ರು ಹೋಗುತ್ತಾರೆ.ಸಾವಿರ ಕೋಟಿ ಹಗರಣ ಎಂದು ಹಲವರು ಮಾತನಾಡುತ್ತಿದ್ರು.ಸಿಎಂ ಅವರು 14 ಸೈಟ್ ವಾಪಾಸ್ ಕೊಟ್ಟ ಮೇಲೆ 5 ಸಾವಿರ ಕೋಟಿ ಹಗರಣ ಎಲ್ಲಿ ಹೋಯ್ತು.ಮುಡಾದಲ್ಲಿ 5 ಸಾವಿರ ಕೋಟಿ ಹಗರಣ ಆಗಿದ್ದರೆ ಪಟ್ಟಿ ಬಿಡುಗಡೆ ಮಾಡಿ.ಸಿಎಂ ಸಿದ್ದರಾಮಯ್ಯನವರನ್ನು ಮಾತ್ರ ಟಾರ್ಗೆಟ್ ಮಾಡಿದ್ರಲ್ಲಾ.ಇದರಿಂದ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು.ಸಿಎಂ ನೆನ್ನೆ ವರುಣ ಕ್ಷೇತ್ರದಲ್ಲಿ ಭಾವುಕರಾಗಿ ಭಾಷಣ ಮಾಡಿದರು.ಇದುವರೆಗೂ ಸ್ವಂತ ಮನೆಕಟ್ಟಿಕೊಳ್ಳಲಿಕ್ಕೆ ಆಗಿಲ್ಲ.ಇಡೀ ಕಾಂಗ್ರೆಸ್ ಸಿದ್ದರಾಮಯ್ಯ ಜೊತೆಗೆ ಬಂಡೆಯಂತೆ ನಿಲ್ಲುತ್ತದೆ. ಅಲ್ಲದೆ ಬೈ ಎಲೆಕ್ಷನ್ ನಲ್ಲಿ ಜನ ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳೀ ನಡೆಸಿದರು.
ಜಾತಿಗಣತಿ ವರದಿಯನ್ನು ದಯವಿಟ್ಟು ಯಾರು ವಿರೋಧಿಸಬೇಡಿ
ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲೇಬೇಕು. ಜಾತಿಗಣತಿ ವರದಿಯನ್ನು ಒಕ್ಕಲಿಗರು ಯಾಕೆ ವಿರೋಧ ಮಾಡ್ತಿದ್ದಾರೋ ಗೊತ್ತಿಲ್ಲ.ನಾನು ಕೂಡ ಒಕ್ಕಲಿಗನಾಗಿ ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡುತ್ತಿದ್ದೇನೆ.ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೂ ಜಾತಿಗಣತಿ ವರದಿಯಿಂದ ಲಾಭವಿದೆ.ಜಾತಿಗಣತಿ ವರದಿಯ ಬಗ್ಗೆ ದಯವಿಟ್ಟು ವಿರೋಧ ಮಾಡಬೇಡಿ.ಈಗ ನೀವು ಇದಕ್ಕೆ ಸಹಕಾರ ನೀಡದೆ ಇದ್ರೇ ಮುಂದೆ ಬಿಡುಗಡೆ ಮಾಡಲು ಸಾಧ್ಯವಿಲ್ಲ.ಜಾತಿಗಣತಿ ವರದಿ ಬಿಡುಗಡೆ ವಿಚಾರದಲ್ಲಿ ರಾಜಕಾರಣ ಮಾಡೋದು ಬೇಡ ಎಂದು ಲಕ್ಷ್ಮಣ್ ಮನವಿ ಮಾಡಿದರು.