ಮೈಸೂರು: ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಾಲಿ ಮೈಸೂರು-ಕೊಡಗು ಕ್ಷೇತ್ರ ಸಂಸದ ಪ್ರತಾಪ್ ಸಿಂಹಗೆ ಕೊಕ್ ನೀಡಿ, ಯದುವೀರ್ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ‘ಯದುವೀರ್ ನಮ್ಮ ಎಂಪಿ ಆಗುತ್ತಾರೆ ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆ, ಯದುವೀರ್ಗೆ ವೋಟ್ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ. ಹಾಗಾಗಿ ನಮ್ಮ ವೋಟ್ ಕೊಟ್ಟು ರಾಜಮನೆತನಕ್ಕೆ ಋಣ ಸಂದಾಯ ಮಾಡೋಣ ಎಂದಿದ್ದಾರೆ.
‘ಈ ಹಿಂದೆ ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹನನ್ನ ಒಂದು ರೂಪಾಯಿ ಪಡೆಯದೇ ಗೆಲ್ಲಿಸಿದ್ದೇವೆ. ಅವರು ಕೂಡ ಒಂದು ರೂಪಾಯಿ ಪಡೆಯದೇ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಪ್ರತಾಪ್ ಸಿಂಹರನ್ನು ಅಭಿನಂದಿಸುತ್ತೇನೆ. ಅವರು 10 ವರ್ಷಗಳಲ್ಲಿ ಎಷ್ಟು ಮನೆಗೆ ಭೇಟಿ ನೀಡಿದ್ದಾನೆ. ಯದುವೀರ್ಗೆ ಅವಕಾಶ ಕೊಡಿ, ನಿಮ್ಮ ಮನೆ ಮನೆಗೆ ಬರುತ್ತಾರೆ. ಮಹಾರಾಜರು ಎಂಪಿಯಾದರೆ ನಿಮ್ಮ ಅಭಿವೃದ್ಧಿ ಬಾಗಿಲು ತೆರೆಯುತ್ತದೆ. ಬಡವರ ಕಷ್ಟಕ್ಕೆ ಆಗುತ್ತಾರೆ. ಯದುವೀರ್ಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರೇ ಗೌರವ ಕೊಡುತ್ತಾರೆ ಎಂದರು.