ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ ದಿನಗಣನೆ ಆರಂಭವಾಗಿದೆ. ಜಂಬೂಸವಾರಿಯ ಆಕರ್ಷಣೀಯ ಕೇಂದ್ರಬಿಂದು ಗಜಪಡೆಯ ಪಟ್ಟಿ ಅಂತಿಮವಾಗಿದೆ. ಈ ಬಾರಿಯ ದಸರಾದಲ್ಲಿ ಭಾಗವಹಿಸಲು
14 ಆನೆಗಳು ಆಯ್ಕೆಯಾಗಿದೆ. ಜಂಬೂ ಸವಾರಿಯಲ್ಲಿ ಭಾಗಿಯಾಗುವ 14 ಆನೆಗಳ ಪಟ್ಟಿ ಬಿಡುಗಡೆ ಆಗಿದ್ದು, ಅಭಿಮನ್ಯು ನೇತೃತ್ವದ 14 ಆನೆಗಳ ಪಟ್ಟಿಯನ್ನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಿಡುಗಡೆ ಮಾಡಿದ್ದಾರೆ.
ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ, ಲಕ್ಷ್ಮಿ, ಕಂಜನ್, ರೋಹಿತ್,
ಮತ್ತು ಏಕಲವ್ಯ ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಲಿರುವ ಆನೆಗಳಾಗಿವೆ.
ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮಿ ಮತ್ತು ಹಿರಣ್ಯ ಎರಡನೇ ಹಂತದಲ್ಲಿ ಮೈಸೂರಿಗೆ ಅಗಮಿಸಲಿವೆ.
ಹೆಚ್ಚುವರಿಯಾಗಿ ಹರ್ಷ, ಅಯ್ಯಪ್ಪ, ಪಾರ್ಥಸಾರಥಿ ಮತ್ತು ಮಾಲಾದೇವಿ ಆನೆಗಳನ್ನು ಮೀಸಲು ಆನೆಗಳು ಎಂದು ಗುರುತಿಸಿ ಮೈಸೂರಿಗೆ ಕರೆತರಲಾಗುತ್ತಿದೆ. ಈ ಬಾರಿಯ ಜಂಬೂ ಸವಾರಿಯಲ್ಲಿ ಭಾಗಿಯಾಗುವ 14 ಆನೆಗಳಲ್ಲಿ 11 ಗಂಡು ಮತ್ತು 3 ಹೆಣ್ಣು ಆನೆಗಳಾಗಿವೆ.