ಮೈಸೂರು: ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ಶಾಸಕ ಶ್ರೀವತ್ಸ ಮುಡಾದಲ್ಲಿ ಜಿ ಕೆಟಗರಿ ಸೈಟ್ ಪಡೆಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪ ಎರಡನೇ ಬಾರಿ ಸಿಎಂ ಆಗಿದ್ದಾಗ ಶಾಸಕ ಶ್ರೀವತ್ಸ ಮುಡಾದಲ್ಲಿ ಜಿ ಕೆಟಗರಿ ಸೈಟ್ ಪಡೆಡಿದ್ದಾರೆ, ಜಿ ಕೆಟಗರಿ ಸೈಟ್ ಪಡೆಯಬೇಕಾದರೆ ಸಂವಿಧಾನಿಕ ಹುದ್ದೆಯಲ್ಲಿರಬೇಕು.ಈ ಬಗ್ಗೆ ಬಿಜೆಪಿ ಕಾರ್ಯಕರ್ತರೆ ನಮಗೆ ಮಾಹಿತಿ ನೀಡಿದ್ದಾರೆ. ಒಬ್ಬ ಬಿಜೆಪಿ ಕಾರ್ಯಕರ್ತ ಹೇಗೆ ಜಿ ಕೆಟಗರಿ ಸೈಟ್ ಪಡೆಯಲು ಸಾಧ್ಯವೆಂದು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಶ್ರೀವತ್ಸ ಲಾಟರಿ ಹೊಡೆದಂಗೆ ಎಂ ಎಲ್ ಎ ಆಗಿದ್ದಾರೆ. ಅವರು ಮಾತ್ರ ಸಿದ್ದರಾಮಯ್ಯ, ಕಾಂಗ್ರೆಸ್ಸಿಗರನ್ನು ಬೈಯ್ಯಬಹುದು ಆದರೆ ಸಿದ್ದರಾಮಯ್ಯ ವಿರುದ್ಧ ಮಾತನಾಡಿದಾಗ ನಾವು ಸುಮ್ಮನೆ ಕೂರಬೇಕಾ? ನನಗೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ.
ಡಿಫಮೇಷನ್ ಕೇಸನ್ನೇ ಎದುರಿಸುತ್ತೇನೆ, ಇನ್ನೂ ನೋಟೀಸ್ ಗೆ ಹೆದರುತ್ತೀನಾ ಎಂದು ಪ್ರಶ್ನಿಸಿದ್ದಾರೆ.
ಐ ಆಮ್ ನಾಟ್ ಎ ಸೆಲ್ಫ್ ಸ್ಟೈಲ್ ಪೊಲಿಟಿಷಿಯನ್ ನಾನು ರಾಷ್ಟ್ರೀಯ ಪಕ್ಷದ ರಾಜ್ಯ ಮಾಧ್ಯಮ ವಕ್ತಾರ.
ಸ್ಪೋಕ್ ಪರ್ಸನ್ ಕೆಲಸ, ನಮ್ಮ ಮೇಲೆ ಆರೋಪ ಬಂದಾಗ ಮಾತನಾಡುವುದೇ ನಮ್ಮ ಕೆಲಸ.
ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಬಾಯಿಗೆ ಬಂದಹಾಗೆ ಮಾತನಾಡಿದರೂ ಸುಮ್ಮನಿರಬೇಕಾ?
ನಿಮ್ಮ ಮಾತಿಗೆ ಕೌಂಟರ್ ಕೊಟ್ಟಿದ್ದೀವಿ ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿ ನೀವು ಮಾತನಾಡಿರುವ ಬಗ್ಗೆ ನಾವು ಸಹ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಶ್ರೀವತ್ಸಗೆ ಟಾಂಗ್ ಕೊಟ್ಟ ಅವರು, ಶ್ರೀವತ್ಸ ಸೈಟ್ ಪಡೆದಿರುವ ಬಗ್ಗೆ ದಾಖಲೆ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ 63 ಕೇಸ್ ಗಳಿವೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ವಿರುದ್ಧ ಇರುವ 63 ಕೇಸ್ ಗಳು ಯಾವುವು ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಲಿ. ಸಿಎಂ ವಿರುದ್ಧ 2007 ರಿಂದ 23ರ ವರೆಗೆ ಒಟ್ಟು 20 ಕೇಸ್ ಗಳು ಮಾತ್ರ ದಾಖಲಾಗಿವೆ ಆದರೆ ಹೆಚ್ ಡಿ ಕೆ 63 ಕೇಸ್ ಗಳು ಎಂದು ಸುಳ್ಳು ಹೇಳುತ್ತಿದ್ದಾರೆ. ಇರುವ 20 ಕೇಸ್ ಗಳು ಪ್ರತಿಭಟನೆ ಮಾಡಿರುವ ಕೇಸ್ ಗಳಾಗಿದ್ದು, ಯಾವುದು ಸಹ ಕಳ್ಳತನ, ಮೋಸ ಮಾಡಿರುವ ಪ್ರಕರಣಗಳಲ್ಲ. ಕೋವಿಡ್ ವೇಳೆ ಪ್ರತಿಭಟನೆ ನಡೆಸಿದ ಬಗ್ಗೆ ಕೇಸ್ ಇದೆ, ಪೇ ಸಿಎಂ ಅಭಿಯಾನದ ಕೇಸ್ ಇದೆ,
ಮೇಕೆದಾಟು ಪಾದಯಾತ್ರೆಯ ಬಗ್ಗೆ 4 ಕೇಸ್ ಇವೆ, ಹುಬ್ಬಳ್ಳಿಯಲ್ಲಿ ಪ್ರೆಸ್ ಮೀಟ್ ಮಾಡಿದ್ದಕ್ಕೆ 4 ಕೇಸ್ ಗಳಿವೆ ಇವುಗಳಲ್ಲಿ ಕಳ್ಳತನ, ಮೋಸ ಮಾಡಿರುವ ಕೇಸ್ ಗಳು ಇವೆಯಾ? ಇದ್ದರೆ ಹೇಳಿ ಸುಮ್ಮನೆ ಸುಳ್ಳು ಹೇಳಬಾರದು ಎಂದು ಎಚ್ಡಿಕೆ ಗೆ
ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಟಾಂಗ್ ಕೊಟ್ಟಿದ್ದಾರೆ.