ಪ್ರತಿನಿಧಿ ವರದಿ ಗೋಣಿಕೊಪ್ಪ
ಗೋಣಿಕೊಪ್ಪ ಮಹಿಳಾ ದಸರಾ ಅಕ್ಟೋಬರ್ 6 ರಂದು ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳುವ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ನಡೆಯುವ ಕ್ರೀಡಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮಹಿಳಾ ದಸರಾ ಅಧ್ಯಕ್ಷ ಎಂ.ಮಂಜುಳ ಮನವಿ ಮಾಡಿಕೊಂಡಿದ್ದಾರೆ.
ಕಾವೇರಿ ಕಲಾ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಹೊರಾಂಗಣ ಸ್ಪರ್ಧೆಗಳು ನಡೆಯಲಿವೆ. ಹಗ್ಗ ಜಗ್ಗಾಟ (7 ಜನರ ತಂಡ), ರಂಗೋಲಿ ಸ್ಪರ್ಧೆ, ಬಾಲ್ ಇನ್ ದ ಬಾಸ್ಕೆಟ್, ಕೈಕಟ್ಟಿ ಸೇಬನ್ನು ತಿನ್ನುವ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12 ರ ನಂತರ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದ್ದು, ಜಾನಪದ ಗೀತೆ ಸ್ಪರ್ಧೆ (6 -8 ಜನರ ತಂಡ) – 4+1 ನಿಮಿಷ, ಸಾಮೂಹಿಕ ನೃತ್ಯ ( 8 ಜನಕ್ಕೆ ಮೇಲ್ಪಟ್ಟು ) – 5+1 ನಿಮಿಷ, ಫ್ಯಾಶನ್ ಶೋ (ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆಗಳು) ಸ್ಪರ್ಧೆ ನಡೆಯಲಿವೆ. ರಂಗೋಲಿ ಮತ್ತು ಹಗ್ಗಜಗ್ಗಾಟದ ನೋಂದಣಿಗೆ ಮಂಜುಳಾ– 9448721017, ಸಾಂಸ್ಕೃತಿಕ ಕಾರ್ಯಕ್ರಮ ನೋಂದಣಿಗಾಗಿ ವರಲಕ್ಷ್ಮಿ– 9980188429 ಸಂಪರ್ಕಿಸಬಹುದಾಗಿದೆ.
21 ವರ್ಷ ಮೇಲ್ಪಟ್ಟ ಮಹಿಳೆಯರು ಪಾಲ್ಗೊಳ್ಳಬಹುದಾಗಿದೆ. ರಂಗೋಲಿಗೆ ರಂಗೋಲಿ ಪುಡಿಯಲ್ಲಿ ಮಾತ್ರ ಬಳಸಬೇಕಿದೆ. ಸ್ಪರ್ಧಿಗಳೇ ತರಬೇಕಿದೆ. ಸೆಪ್ಟೆಂಬರ್ 30 ರ ಒಳಗೆ ನೋಂದಣಿ ಮಾಡಿಕೊಳ್ಳಬೇಕಿದೆ.