ಪಾರಾಣೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದರಿ ಸಂಸತ್ ಚುನಾವಣೆ ನಡೆಯಿತು. ಭವ್ಯ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವದೊಂದಿಗೆ, ಆಡಳಿತ ವ್ಯವಸ್ಥೆಯ ಅರಿವು ಮೂಡಿಸುವ ಉದ್ದೇಶ ತಿಳಿಸಿಕೊಡಲಾಯಿತು.
ಮುಖ್ಯ ಶಿಕ್ಷಕಿ ವೇದಪ್ರಸಾದ್ ನಿರ್ದೇಶನದಂತೆ ಚುನಾವಣೆ ನಡೆಯಿತು. ಪ್ರಧಾನ ಮಂತ್ರಿಯಾಗಿ ಜೆ.ಸಿ.ಮನು, ಉಪ ಪ್ರಧಾನಿಯಾಗಿ ಹೆಚ್.ಪಿ.ಪೊನ್ನಪ್ಪ, ಗೃಹ ಮಂತ್ರಿಗಳಾಗಿ ಪ್ರೀತಂ ಮತ್ತು ತಶ್ವಿನ್, ಆರೋಗ್ಯ ಮಂತ್ರಿಗಳಾಗಿ ರಚನ, ಮತ್ತು ನವ್ಯ ಕ್ರೀಡಾ ಮಂತ್ರಿಯಾಗಿ ಪೊನ್ನಪ್ಪ, ಸಾಂಸ್ಕೃತಿಕ ಸಚಿವರಾಗಿ ತಾನ್ಸಿ ಮತ್ತು ಸಿಂಧು, ಸ್ವಚ್ಚತಾ ಸಚಿವರಾಗಿ ನೇಹಾಲ್ ಮತ್ತು ಶಶಾಂಕ್, ತೋಟಗಾರಿಕೆ ಮಂತ್ರಿಗಳಾಗಿ ಡೆವಿನ್ ಕರುಂಬಯ್ಯ, ಮತ್ತು ಹೇಮಂತ್, ವಾರ್ತಾ ಮಂತ್ರಿಯಾಗಿ ನಂದಿನಿ, ಆಹಾರ ಮಂತ್ರಿಗಳಾಗಿ ಸಿಂಧು, ಮತ್ತು ಪೂಜ ಚುನಾಯಿತರಾದರು. ಪ್ರಜಾಪ್ರಭುತ್ವ ಮಾದರಿಯಲ್ಲಿ ಗುಪ್ತ ಮತದಾನ ನಡೆಯಿತು. ಶಿಕ್ಷಕ ವೃಂದ ಇದ್ದರು.
ಫೋಟೋ 14 ಎಂಡಿಕೆ 02 ; ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾದರಿ ಸಂಸತ್ ಚುನಾಯಿತರು.