ಪ್ರತಿನಿಧಿ ವರದಿ ಸಾಲಿಗ್ರಾಮ
ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆ ಗುರುವಾರ ಶುರುವಾಯಿತು.
30 ಮಂದಿ ರೈತರಿಂದ 400 ಕ್ವಿಂಟಾಲ್ ರಾಗಿಯನ್ನು ಮೊದಲ ದಿನ ಖರೀದಿಸಲಾಯಿತು. ‘ಏಪ್ರಿಲ್ 20 ರವರೆಗೆ ಒಟ್ಟು 530 ರೈತರಿಗೆ ಈ ಖರೀದಿ ಕೇಂದ್ರಕ್ಕೆ ರಾಗಿ ಬಿಡಲು ಟೋಕನ್ ನೀಡಲಾಗಿದೆ. ಪ್ರತಿದಿನ 30 ರಿಂದ 40 ರೈತರಿಂದ ರಾಗಿ ಖರೀದಿಸಲಾಗುವುದು. 2800 ರೈತರು ಈ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡಿದ್ದು, 45,000 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು. ನೋಂದಣಿ ಮಾಡಿಸಿರುವ ಎಲ್ಲ ರೈತರಿಂದಲೂ ಖರೀದಿಸಲಾಗುವುದು ಎಂದು ಖರೀದಿ ಅಧಿಕಾರಿ ನಿತಿನ್ ನಾಯಕ್ ತಿಳಿಸಿದ್ದಾರೆ.
ಚಿತ್ರಶೀರ್ಷಿಕೆ:ಸಾಲಿಗ್ರಾಮದ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಗುರುವಾರ ರಾಗಿ ಖರೀದಿ ಪ್ರಕ್ರಿಯೆ ಶುರುವಾಯಿತು.