ಸರ್ಕಾರವು ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಅಧಿಕೃತವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ PWD ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು ಬರಗಾಲ ಘೋಷಣೆ ಕುರಿತು ನಿಮಯ ಬದಲಾಯಿಸಬೇಕಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರ ಪರಿಹಾರ ಸಿಗಲಿದೆ. ಬರ ಪರಿಹಾರ ಕುರಿತು ಕೇಂದ್ರದ ಕೆಲ ನಿಯಮ ಬದಲಾವಣೆ ಆಗಬೇಕಿದೆ. ಬರಗಾಲದ ಮಾನದಂಡ ಬದಲಾವಣೆ ರಾಜ್ಯಕ್ಕೆ ಮಾತ್ರ ಸಿಮೀತವಾಗಿಲ್ಲ. ಇಡೀ ದೇಶಕ್ಕೆ ಸಂಬಂದಿಸಿದ್ದು ಹಾಗಾಗಿ ಬದಲಾವಣೆ ಮಾಡಬೇಕು ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ PWD ಸಚಿವ ಸತೀಶ್ ಜಾರಕಿಹೊಳಿ, ಬರಗಾಲ ಘೋಷಣೆ ಕುರಿತು ನಿಯಮಗಳಲ್ಲಿ ಬದಲಾವಣೆ ಆಗಬೇಕಿದೆ. ಕೇಂದ್ರ ಸರ್ಕಾರದ ಹಣ ಕಡಿಮೆ ಇದೆ ಹಾಗಾಗಿ ಬದಲಾವಣೆ ಅವಶ್ಯಕತೆ ಇದೆ. ಬರಗಾಲದ ಮಾನದಂಡ ಬದಲಾವಣೆ ಕರ್ನಾಟಕಕ್ಕೆ ಮಾತ್ರ ಸಿಮೀತವಾಗಿಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ್ದು ಹಾಗಾಗಿ ಬದಲಾವಣೆ ಮಾಡಬೇಕು. ಕೇಂದ್ರ ಸರ್ಕಾರದ ರೂಲ್ಸ್ ಗಳಲ್ಲಿ ಬಹಳಷ್ಟು ಸಮಸ್ಯೆಗಳಿವೆ ಎಂದರು.