ಮೈಸೂರು: ಕಳೆದ ಸಭೆಯಲ್ಲಿ ನಡೆಸಲಾಗಿರುವ ವಿಚಾರಗಳ ಬಗ್ಗೆ ಇಂದು ಮುಡಾ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಕೆಲವೊಂದು ವಿಷಯಗಳಿಗೆ ಸಭೆಯ ಅನುಮೋದನೆ ಬೇಕಿದ್ದು, ಈ ವಿಚಾರಗಳನ್ನಷ್ಟೇ ಚರ್ಚೆ ಮಾಡುತ್ತೇವೆ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ.
ಮುಡಾ ಸಾಮಾನ್ಯ ಸಭೆಗೂ ಮುನ್ನ ಇಂದಿನ ಸಭೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಕಳೆದ ಒಂದು ವರ್ಷದಿಂದ ಸಭೆ ನಡೆದಿರಲಿಲ್ಲ ಹೀಗಾಗಿ ಸಾರ್ವಜನಿಕರು ಸಾಕಷ್ಟು ತೊಂದರೆ ಪಡುತ್ತಿದ್ದರು ಅದಕ್ಕಾಗಿ ಇಂದು ಸಭೆ ನಡೆಸಲಾಗುತ್ತಿದೆ. ಕಳೆದ ಸಭೆಯಲ್ಲಿ ನಡೆಸಲಾಗಿರುವ ವಿಚಾರಗಳ ಬಗ್ಗೆ ಇಂದು ಮುಡಾ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಕೆಲವೊಂದು ವಿಷಯಗಳಿಗೆ ಸಭೆಯ ಅನುಮೋದನೆ ಬೇಕಿದ್ದು, ಈ ವಿಚಾರಗಳನ್ನಷ್ಟೇ ಚರ್ಚೆ ಮಾಡುತ್ತೇವೆ. ಮುಡಾದಲ್ಲಿ 50:50 ಅನುಪಾತ ರದ್ದು ಮಾಡಿ ಎಂದು ಹೇಳೋದಿಲ್ಲ. ಆದರೆ 50:50 ಅನುಪಾತದಲ್ಲಿ ಮಂಜೂರಾಗಿರುವ ಅಕ್ರಮ ಸೈಟ್ ಗಳನ್ನು ರದ್ದು ಮಾಡಬೇಕು. ಅಕ್ರಮವಾಗಿ ನೀಡಿರುವ ನಿವೇಶನಗಳನ್ನು ಸರ್ಕಾರ ವಾಪಸ್ ಪಡೆಯಲಿ ಎಂದು ಹೇಳಿದರು.