ಹುಬ್ಬಳ್ಳಿ: ಸಾಲು ಸಾಲು ಹಗರಣಗಳಿಂದ ಕಂಗೆಟ್ಟಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಗ್ಗೆ MLC ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ. ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ. ಸರ್ಕಾರ ಪತನಕ್ಕೆ ಟೈಮ್ ಬಾಂಬ್ ಫಿಕ್ಸ್ ಆಗಿದೆ. ಸಂಕ್ರಾಂತಿ ದೂರ ಆಯ್ತು, ದೀಪಾವಳಿ ಒಳಗೆ ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರ ಢಮಾರ್ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೊಸ ಮುಖ್ಯಮಂತ್ರಿ,ಹೊಸ ಸರ್ಕಾರನಾ ಅಂದ್ರೆ ಕಾಲ ನಿರ್ಣಯ ಮಾಡುತ್ತದೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮುಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದಿವಿ ಅಂತಾರೆ. ಸಿದ್ದರಾಮಯ್ಯ ಹೋಗೋದು ಫಿಕ್ಸ್ ಆಗಿದ್ದು, ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ. ಒಂದು ಡಜನ್ ಗೆ ಹೆಚ್ಚು ಜನ ಆಕಾಂಕ್ಷಿಗಳಾಗಿದ್ದಾರೆ. ಸಿಎಂ ಸಂಗೊಳ್ಳಿ ರಾಯಣ್ಣ ಪಿತೂರಿಗೆ ಬಲಿಯಾಗಿದ್ದಾರೆ ಎಂದಿದ್ದರು. ನೀವು ಸಂಗೊಳ್ಳಿ ರಾಯಣ್ಣ ಅಂತಾ ನಾನು ಭಾವಿಸಲ್ಲ ಎಂದು ಸಿ ಟಿ ರವಿ ಹೇಳಿದರು.ಸರ್ಕಾರದಲ್ಲಿ ಬರೀ ಹಗರಣಗಳೇ ಸುದ್ದಿ. ಇದು ಬ್ರಷ್ಟಾಚಾರದ ಸರ್ಕಾರ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಕಳ್ಳನ ಹೆಂಡತಿ ಯಾವತ್ತಿದರೂ ಡ್ಯಾಶ್ ಡ್ಯಾಶ್ ಅಂತ ವ್ಯಂಗ್ಯವಾಡಿದ್ದಾರೆ.