ಪ್ರತಿನಿಧಿ ವರದಿ ಹುಣಸೂರು
ತಾಲೂಕಿನ ಉಮ್ಮತ್ತೂರು ಚೆಕ್ಪೋಸ್ಟ್ ನಲ್ಲಿ ವರ್ತಕ ರೊಬ್ಬರಿಂದ ೭೨,೩೧೦ ರೂ.ಗಳ ನಗದು ಹಣವನ್ನು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಪಡಿಸಿಕೊಂಡರು.
ಶನಿವಾರ ತಡರಾತ್ರಿ ೧೧ ರವೇಳೆಗೆ ಎಚ್.ಡಿ.ಕೋಟೆ ಮಾರ್ಗದಿಂದ ಹುಣಸೂರು ಕಡೆ ಬರುತ್ತಿದ್ದ ಮೈಸೂರಿನ ಚಾಮುಂಡೇಶ್ವರಿ ಫುಡ್ಸ್ ಕಂಪನಿಯ ಲಾರಿಯಲ್ಲಿ ಮಾಲೀಕ ನಾಗಬಸವಣ್ಣರ ಬಳಿ ಚುನಾವಣಾ ಆಯೋಗ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಇದ್ದುದನ್ನು ಗಮನಿಸಿ ವಶಕ್ಕೆ ಪಡೆದರು. ಹಣವನ್ನು ಖಜಾನೆಗೆ ಜಮಾಗೊಳಿಸಲಾಗಿದ್ದು, ಚುನಾವಣೆ ಸಂಪನ್ನಗೊಂಡ ನಂತರ ವಶಪಡಿಸಿಕೊಂಡ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ವಾಪಸು ಪಡೆಯಬಹುದಾಗಿದೆ ಎಂದು ನೋಡಲ್ ಅಧಿಕಾರಿ ಶಿವಕುಮಾರ್ ಪತ್ರಿಕೆಗೆ ತಿಳಿಸಿದರು.
೩೧ಊUಓ೨: ಹುಣಸೂರು ತಾಲೂಕು ಉಮ್ಮತ್ತೂರು ಚೆಕ್ ಪೋಸ್ಟ್ ನಲ್ಲಿ ವರ್ತಕರೊಬ್ಬರಿಂದ ೭೨,೩೧೦ರೂಗಳನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದರು.