ಮೈಸೂರು: ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ಕಾವು ಎಲ್ಲೆಡೆ ಪಸರಿಸಿದೆ. ರಾಜಕಾರಣಿಗಳು, ಅಧಿಕಾರಿಗಳು, ಡೆವಲಪರ್ಸ್, ಮಧ್ಯವರ್ತಿಗಳು ಎಲ್ಲಾರ ಸರದಿ ಮುಗೀತು, ಇದೀಗ ಜನಸಾಮಾನ್ಯರ ಸರದಿ. ಮುಡಾದಲ್ಲಿ 50-50 ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿನ ಹಗರಣ ವಿಚಾರ ಸಂಬಂಧಿಸಿದಂತೆ, 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಶುರುವಾಗಿದೆ ಬಿಗ್ ಟೆನ್ಷನ್.
50:50 ಅನುಪಾತದ ಸೈಟ್ ಗಳನ್ನು ವಾಪಸ್ ಪಡೆಯುವ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಲಿಖಿತ ಸೂಚನೆ ಕೊಟ್ಟಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಲಿಖಿತ ಸೂಚನೆ ನೀಡಿದ್ದು, ಈ ಮೂಲಕ ಶಾಸಕ ಶ್ರೀವತ್ಸ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ.
50:50 ಅನುಪಾತದಡಿಯಲ್ಲಿ ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ರದ್ದು ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಶ್ರೀವತ್ಸ ಮನವಿ ಕೊಟ್ಟಿದ್ದರು. ಇದೀಗ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸೈಟ್ಗಳನ್ನು ವಾಪಾಸ್ ಪಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಮುಡಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಕ್ರಮದ ಅರಿವಿಲ್ಲದೆ ನಿವೇಶನಗಳನ್ನು ಪಡೆದಿರುವ ಸಾರ್ವಜನಿಕರಿಗೆ ಈ ಮೂಲಕ ಶುರುವಾಗಿದೆ ಬಿಗ್ ಟೆನ್ಶನ್. ಅಲ್ಲದೆ ಅಧಿಕಾರಿಗಳು, ಜನನಾಯಕರು ಮಾಡಿದ ತಪ್ಪಿಗೆ ಜನಸಾಮಾನ್ಯರು ದಂಡ ತೆತ್ತಬೇಕಿದೆ.