ಬೆಂಗಳೂರು, (ಸೆಪ್ಟೆಂಬರ್. 21): ಎರಡು ಟೆಕ್ ಹಬ್ಗಳಾದ ಬೆಂಗಳೂರು ಮತ್ತು ಹೈದರಾಬಾದ್ಗಳನ್ನು ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬೆಂಗಳೂರಿನ ಯಶವಂತಪುರದಿಂದ ಹೈದರಾಬಾದ್ನ ಕಾಚಿಗುಡ ವರೆಗೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇದೇ ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಹೈದರಾಬಾದ್ನ ಕಾಚಿಗುಡ – ಯಶವಂತಪುರ ನಿಲ್ದಾಣದ ನಡುವೆ ಸಂಚರಿಸುವ ರೈಲು ದಕ್ಷಿಣ ಭಾರತದ ಎರಡು ಐಟಿ ನಗರಗಳ ನಡುವಿನ ಮೊದಲ ವಂದೇ ಭಾರತ್ ರೈಲು ಆಗಿದೆ. ಇಂದು ಪ್ರಯೋಗಿಕ ಸಂಚಾರ ನಡೆಯಲಿದ್ದು, ಇಂದು ರೈಲು ಕಾಚಿಗುಡದಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 2:45 ಕ್ಕೆ ಯಶವಂತಪುರದಿಂದ ಕಾಚಿಗುಡ ತೆರಳಲಿದೆ. ರೈಲು ಸುಮಾರು 610 ಕಿ.ಮೀ ಅಂತರವನ್ನು 7 ಗಂಟೆಯಲ್ಲಿ ಕ್ರಮಿಸಬಹುದು ಎಂದು ಬೆಂಗಳೂರು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.