ಪ್ರತಿನಿಧಿ ವರದಿ ಗುಂಡ್ಲುಪೇಟೆ
ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಸೆ.4ರಂದು ನಡೆಸಲಿದ್ದು, ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸೆ.4 ರಂದು ಗುಂಡ್ಲುಪೇಟೆಯ ಪುರಸಭಾ ಕಚೇರಿಯ ಸಭಾ ಭವನದಲ್ಲಿ ಚುನಾವಣೆ ನಡೆಯಲಿದ್ದು, ಬೆಳಗ್ಗೆ 10.30 ರಿಂದ 12 ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು.
ನಾಮಪತ್ರ ಪರಿಶೀಲನೆಕಾರ್ಯವುಮಧ್ಯಾಹ್ನ 12 ರಿಂದ 12.30 ಗಂಟೆವರೆಗೆ ಜರುಗಲಿದ್ದು, ಮ. 12.30ರ ನಂತರ ಕ್ರಮಬದ್ದವಾದ ಅಭ್ಯರ್ಥಿಗಳ ನಾಮಪತ್ರಗಳು ಹಾಗೂ ತಿರಸ್ಕೃತ ಅಭ್ಯರ್ಥಿಗಳ ನಾಮಪತ್ರ ಪಟ್ಟಿ ಪ್ರಕಟಿಸಲಾಗುತ್ತದೆ. 12.30 ರಿಂದ 1 ಗಂಟೆಯವರೆಗೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕಾಲಾವಕಾಶವಿದೆ. ನಾಮಪತ್ರಗಳ ವಾಪಸ್ಸು ಪಡೆಯುವ ಅವಧಿ ಮುಗಿದ ಬಳಿಕ ನಾಮಪತ್ರಗಳ ವಾಪಸ್ಸು ಪಡೆದ ಅಭ್ಯರ್ಥಿಗಳ ಹೆಸರು ಮತ್ತು ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರನ್ನು ಅಂತಿಮವಾಗಿ ಪ್ರಕಟಿಸಲಾಗುತ್ತದೆ.
ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟಣೆ ನಂತರ (ಅಗತ್ಯವಿದ್ದಲ್ಲಿ) ಮತದಾನವು ಮಧ್ಯಾಹ್ನ 1 ರಿಂದ 2 ಗಂಟೆವರೆಗೆ ನಡೆಯಲಿದೆ. 2 ಗಂಟೆಯ ಬಳಿಕ ಅಥವಾ ಮತದಾನ ಮುಗಿದ ನಂತರ ಮತ ಎಣಿಕೆ, ಫಲಿತಾಂಶ ಘೋಷಣೆ ಯಾಗಲಿದೆ.
ಅಧ್ಯಕ್ಷರ ಸ್ಥಾನ ಹಿಂದುಳಿದ ವರ್ಗ ಬಿ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಅಧಿಸೂಚನೆಯಾಗಿರುತ್ತದೆ. ಅಧ್ಯಕ್ಷರ ನಾಮ ಪತ್ರಕ್ಕೆ ಒಬ್ಬರು ಸದಸ್ಯರು ಮಾತ್ರ ಸೂಚಕರಾ ಗಬೇಕು. ಸ್ಪರ್ಧಿಸುವ ಉಮೇದು ದಾರರು, ಅಭ್ಯರ್ಥಿ ತಮ್ಮ ಉಮೇದುವಾರಿಕೆಅರ್ಜಿಯನ್ನು ವಾಪಸ್ಸು ಪಡೆದ ನಂತರ ಅದನ್ನು ಪುನಹ ಹಿಂಪಡೆಯಲು/ರದ್ದುಪಡಿಸಲು ಅವಕಾಶವಿರು ವುದಿಲ್ಲ. ಮತ ಎಣಿಕೆಯಲ್ಲಿ ಸ್ಪರ್ಧಿಸಿರುವ ಅಭ್ಯ ರ್ಥಿಗಳಿಗೆ ಮತಗಳು ಸಮಾನ ಬಂದರೆ ಚೀಟಿ ಎತ್ತುವುದರ ಮೂಲಕ ಫಲಿತಾಂಶ ನಿರ್ಧರಿ ಸಲಾಗುವುದು ಎಂದು ತಹಸೀಲ್ದಾರ್ತಿಳಿಸಿದ್ದಾರೆ.