ಪ್ರತಿನಿಧಿ ವರದಿ ಕೂಡಿಗೆ
ಶ್ರೀ ಹರಕೆ ಚೌಡೇಶ್ವರಿ ದೇವಿ ದೇವಾಲಯದ ವಾರ್ಷಿಕೋತ್ಸವ ಏ.5 ಜರುಗಲಿದ್ದು, ಬೆಳಗ್ಗೆ ಗಣಪತಿ ಹೋಮ, ದುರ್ಗಾ ಹೋಮ, ಕಲಾವೃದ್ಧಿ ಹೋಮ, ಅಭಿಷೇಕ ಕಳಸ ಪ್ರತಿಷ್ಠೆ ಹಾಗೂ ದೇವಿಗೆ ವಿವಿಧ ರೀತಿಯ ಅಲಂಕಾರ ಹಾಗೂ ಅಭಿಷೇಕಗಳು ನೆರವೇರಲಿದೆ.
ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣ ನಡೆಯಲಿದೆ. ಸಂಜೆ ದೀಪಾಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.