ಭದ್ರತಾ ವಿಭಾಗದ ಅಧಿಕಾರಿಗಳು ನಮ್ಮ ಮೆಟ್ರೋದಲ್ಲಿ (Namma Metro) ರೀಲ್ಸ್ ಮಾಡಿ ಹುಚ್ಚಾಟ ನಡೆಸಿದ್ದವನನ್ನ ಪತ್ತೆ ಹಚ್ಚಿ ದಂಡ (Fine) ವಸೂಲಿ ಮಾಡಿದ್ದಾರೆ. ನಮ್ಮ ಮೆಟ್ರೋದಲ್ಲಿ ನ್ಯೂಸ್ಸೆನ್ಸ್ (59) 1 ಉಂಟುಮಾಡಿದ ಆರೋಪದಡಿ ಯೂಟ್ಯೂಬರ್ ಸಂತೋಷ್ ಕುಮಾರ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 500 ರೂ. ದಂಡವಿಧಿಸಿ ಎಚ್ಚರಿಕೆ ನೀಡಲಾಗಿದೆ.
ಬಂಡೆಪಾಳ್ಯದ ಗೆದ್ದನಹಳ್ಳಿಯ ನಿವಾಸಿಯಾಗಿರುವ ಯೂಟ್ಯೂಬರ್ ಸಂತೋಷ್ ಕುಮಾರ್ ಡಿಸೆಂಬರ್ 24 ರಂದು ಮೆಟ್ರೋ ಚಲಿಸುತ್ತಿದ್ದಾಗ ರೀಲ್ಸ್ ಮಾಡ್ತಾ ಸಹ ಪ್ರಯಾಣಿಕರಿಗೆ ತೊಂದರೆ ಕೊಟ್ಟಿದ್ದರು. ಮೆಟ್ರೋ ರೈಲಿನಲ್ಲಿ ಹುಚ್ಚಾಟ ಮೆರೆದಿದ್ದರು. ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಯಶ್ ಗೌಡ ಎಂಬ ಅಕೌಂಟ್ ಮೂಲಕ ರೀಲ್ಸ್ ಅಪ್ಲೋಡ್ ಮಾಡಲಾಗಿತ್ತು. ವಿಡಿಯೋವನ್ನ ಆಧರಿಸಿ ಸಂತೋಷ್ ಕುಮಾರ್ ಗೆ ದಂಡ ವಿಧಿಸಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆಸಿ, ವಿಚಾರಣೆ ನಡೆಸಿ ನಮ್ಮ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿದ್ದಾರೆ.