ಮೈಸೂರು ಸೆ.26: ಹೆಣ್ಣು ಕರು ಮಾತ್ರ ಹುಟ್ಟುವ ಲಸಿಕೆಯನ್ನು ನಮ್ಮ ಇಲಾಖೆ ತಯಾರಿಸಿದೆ. ಶೇ.95ರಷ್ಟು ಹೆಣ್ಣು ಕರು ಮಾತ್ರ ಹುಟ್ಟುತ್ತದೆ. ವೈದ್ಯರ ಸಲಹೆ ಪಡೆದು ಇಂಜೆಕ್ಷನ್ ಹಾಕಿಸಿ. ಒಂದು ಲಸಿಕೆಗೆ 250 ರೂ. ಕೊಟ್ಟು ರೈತರು ಖರೀದಿಸಬೇಕು ಎಂದು ಪಶುಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದರು. ಮೈಸೂರಿನ ಉತ್ತನಹಳ್ಳಿಯಲ್ಲಿ ನಡೆದ ಪಶು ಇಲಾಖೆ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 290 ಪಶು ಆಂಬುಲೆನ್ಸ್ ಇವೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಮಸ್ಯೆ ಆಗಿದೆ. ಮುಂದಿನ ಹಂತದಲ್ಲಿ ಪಶು ಭಾಗ್ಯ ಪ್ರಾರಂಭ ಮಾಡಬೇಕು. ಪಶು ಸಂಗೋಪನೆ ಇಲಾಖೆಗೆ 18,000 ಸಿಬ್ಬಂದಿ ಅವಶ್ಯಕತೆ ಇದೆ. ಆದರೆ ವಾಸ್ತವವಾಗಿ 9,000 ಸಿಬ್ಬಂದಿ ಮಾತ್ರ ಇದ್ದಾರೆ. ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರು.